ಆಂಧ್ರಪ್ರದೇಶದಲ್ಲಿ 13 ಹೊಸ ಜಿಲ್ಲೆ ರಚನೆ: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ

Prasthutha|

ಅಮರಾವತಿ: ಆಂಧ್ರಪ್ರದೇಶದಲ್ಲಿ ಪ್ರಮುಖ ಆಡಳಿತ ಸುಧಾರಣೆ ತರಲು ಜಗನ್ ಮೋಹನ್ ರೆಡ್ಡಿ ಸರ್ಕಾರ ಇಂದು ಬೆಳಿಗ್ಗೆ 13 ಹೊಸ ಜಿಲ್ಲೆಗಳ ರಚನೆಗೆ ಅಧಿಸೂಚನೆಯನ್ನು ಹೊರಡಿಸಿದೆ.

- Advertisement -

ಆಡಳಿತವನ್ನು ಸರಾಗಗೊಳಿಸಲು ಮತ್ತು ಅಧಿಕಾರಿಗಳ ಪ್ರವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ 13 ಜಿಲ್ಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. 25 ಲೋಕಸಭಾ ಕ್ಷೇತ್ರಗಳನ್ನು ಪ್ರತಿಯೊಂದನ್ನು ಜಿಲ್ಲೆಯಾಗಿ ಪುನಾರಚಿಸಲಾಗಿದೆ. ಅರಕು ಕ್ಷೇತ್ರವನ್ನು ನಾಲ್ಕು ಕ್ಷೇತ್ರಗಳಾಗಿ ರಚಿಲಾಗಿದೆ. ಆಂಧ್ರಪ್ರದೇಶ ಜಿಲ್ಲೆಗಳ ರಚನೆ ಕಾಯ್ದೆಯ ಸೆಕ್ಷನ್ 3(5) ಅಡಿ ಜಿಲ್ಲೆಗಳನ್ನು ರಚನೆ ಮಾಡಲಾಗಿದ್ದು, ಈ ಮೂಲಕ ಆಂಧ್ರಪ್ರದೇಶದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಶ್ರೀ ಬಾಲಾಜಿ, ಅನ್ನಮಯ್ಯ, ಶ್ರೀ ಸತ್ಯಸಾಯಿ, ನಂದ್ಯಾಲ, ಬಾಪಟ್ಲ, ಪಲ್ನಾಡು, ಏಲೂರು, ಎನ್‍ಟಿಆರ್, ಅನಕಾಪಲ್ಲಿ, ಕಾಕಿನಾಡ, ಕೋನಾ ಸೀಮಾ, ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು ನೂತನ ಜಿಲ್ಲೆಗಳಾಗಿದೆ.



Join Whatsapp