T20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ವತಿಯಿಂದ 125 ಕೋಟಿ ರೂ. ಬಹುಮಾನ ಘೋಷಣೆ

Prasthutha|

ನವದೆಹಲಿ: T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ತಂಡಕ್ಕೆ 20 ಕೋಟಿ ರೂ.ಗೂ ಹೆಚ್ಚು ಹಣ ಟ್ರೋಫಿಯೊಂದಿಗೆ ದೊರೆತದ್ದಲ್ಲದೆ, ಬಿಸಿಸಿಐ ವತಿಯಿಂದ ಕಾರ್ಯದರ್ಶಿ ಜಯ್‌ಶಾ ಬೃಹತ್ ಮೊತ್ತವನ್ನು ಬಹುಮಾನವಾಗಿ ಘೋಷಿಸಿದ್ದಾರೆ. ವಿಶ್ವಕಪ್ ವಿಜೇತ ತಂಡಕ್ಕೆ ಜಯ್‌ಶಾ 125 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ.

- Advertisement -

ಭಾರತದ ಅತ್ಯುತ್ತಮ ಸಾಧನೆಗೆ ನೀಡಿದ ಕೊಡುಗೆಗಾಗಿ ಆಟಗಾರರು ಮತ್ತು ಎಲ್ಲಾ ಕೋಚಿಂಗ್ ಸಿಬ್ಬಂದಿಯನ್ನು ಅವರು ಅಭಿನಂದಿಸಿ ಬೃಹತ್ ಮೊತ್ತ ಬಹುಮಾನ ನೀಡಿದ್ದಾರೆ.

ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ಅನ್ನು ಗೆದ್ದ ಟೀಮ್ ಇಂಡಿಯಾಕ್ಕೆ 125 ಕೋಟಿ ರೂ.ಗಳ ಬಹುಮಾನದ ಮೊತ್ತವನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಜಯ್‌ಶಾ ತಮ್ಮ X ಪೋಸ್ಟ್ ನಲ್ಲಿ ಬರೆದಿದ್ದಾರೆ. ತಂಡವು ಪಂದ್ಯಾವಳಿಯುದ್ದಕ್ಕೂ ಅಸಾಧಾರಣ ಪ್ರತಿಭೆ, ದೃಢನಿಶ್ಚಯ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಈ ಅಸಾಧಾರಣ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ಅವರು ಬರೆದುಕೊಂಡಿದ್ದಾರೆ.

- Advertisement -

ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ವಿಶ್ವ ಕಪ್​ ಹಾಗೂ 17 ವರ್ಷಗಳ ಬಳಿಕ ದೊರೆತ ಟಿ20 ವಿಶ್ವ ಕಪ್​. ಕಳೆದೊಂದು ದಶಕದಿಂದ ಭಾರತ ಐಸಿಸಿ ಟ್ರೋಫಿ ಬರ ಅನುಭವಿಸಿತ್ತು. 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಕೆಲ ಅವಕಾಶಗಳು ಟೀಂ ಇಂಡಯಾಗೆ ಒಲಿದಿದ್ದರೂ, ಟ್ರೋಫಿ ಭಾಗ್ಯ ಸಿಗಲಿಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್ ಸೋಲು ಟೀಂ ಇಂಡಿಯಾವನ್ನು ಜರ್ಝರಿತ ಮಾಡಿತ್ತು. ಇದೀಗ ಟಿ20 ವಿಶ್ಪಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದೆ. 2007ರ ಬಳಿಕ 2024ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನ ಸಾಧನೆ ಮಾಡಿದೆ.

Join Whatsapp