ಆಂಧ್ರ ಫ್ಯಾಕ್ಟರಿಯಲ್ಲಿ ಗ್ಯಾಸ್ ಲೀಕ್: 121 ಮಹಿಳೆಯರು ಆಸ್ಪತ್ರೆಗೆ ದಾಖಲು; ತನಿಖೆಗೆ ಆದೇಶ

Prasthutha|

ವಿಶಾಖಪಟ್ಟನಮ್: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಫ್ಯಾಕ್ಟರಿಯಲ್ಲಿ ಉಂಟಾದ ಗ್ಯಾಸ್ ಲೀಕ್ ಪರಿಣಾಮ ಸುಮಾರು 120 ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆಂಧ್ರ ಸರ್ಕಾರ ಆದೇಶ ನೀಡಿದೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಕೈಗಾರಿಕ ಸಚಿವ ಗುಡಿವಾಡ ಅಮರನಾಥ್ ತನಿಖೆ ನಡೆಸುವ ನಿರ್ಧಾರವನ್ನು ಪ್ರಕಟಿಸಿದರು ಮತ್ತು ಸೋರಿಕೆಯ ತನಿಖೆ ಪೂರ್ಣವಾಗುವವರೆಗೂ ಕಂಪನಿಯನ್ನು ಮುಚ್ಚಲಾಗುವುದೆಂದೂ ತಿಳಿಸಿದರು. ಇದು ಕಳೆದ ಎರಡು ತಿಂಗಳಲ್ಲಿ ಅನಿಲ ಸೋರಿಕೆಯ ಎರಡನೇ ಪ್ರಕರಣ ಎಂದು ಅವರು ತಿಳಿಸಿದರು.

ಕಾರ್ಖಾನೆಯಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ 121 ಮಹಿಳಾ ಕಾರ್ಮಿಕರ ಮೇಲೆ ಪರಿಣಾಮ ಬೀರಿದ್ದು, ಅನಕಪಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಜೂನ್ ತಿಂಗಳಲ್ಲಿ ರಾಜ್ಯದ ವಿಶಾಖಪಟ್ಟಣಂನ ಅಚ್ಚುತಪುರಂ ಎಂಬಲ್ಲಿ ಅನಿಲ ಸೋರಿಕೆಯಾಗಿ ಸುಮಾರು 178 ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದರು.



Join Whatsapp