ಇಂಡೋನೇಷ್ಯಾ: ಅನಧಿಕೃತ ಚಿನ್ನದ ಗಣಿಯಲ್ಲಿ ಮಣ್ಣು ಕುಸಿತ ಸಂಭವಿಸಿ 12 ಮಂದಿ ಮಹಿಳೆಯರು ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿರುವ ಮೆಡಾನ್ ಎಂಬಲ್ಲಿ ನಡೆದಿದೆ.
ಉತ್ತರ ಸುಮಾತ್ರದ ಮಾಂಡೈಲಿಂಗ್ ನಟಾಲ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಸಣ್ಣ ಪ್ರಮಾಣದಲ್ಲಿ ಕಾನೂನು ಬಾಹಿರವಾಗಿ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತಿತ್ತು. 2 ಮೀಟರ್ (6.5 ಅಡಿ) ಆಳದ ಹೊಂಡದಲ್ಲಿ ಸುಮಾರು 14 ಮಹಿಳೆಯರು ಗುರುವಾರ ಚಿನ್ನ ಗಣಿಗಾರಿಕೆಯಲ್ಲಿ ತೊಡಗಿದ್ದರು. ಈ ವೇಳೆ, ಭೂಕುಸಿತವಾಗಿ ಅವರಲ್ಲಿ 12 ಮಂದಿ ಸಮಾಧಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.