ನವದೆಹಲಿ: ರಾಜ್ಯಸಭೆಗೆ 12 ಹೊಸ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 9 ಬಿಜೆಪಿ ಸದಸ್ಯರು ಮತ್ತು ಇಬ್ಬರು ಅದರ ಮಿತ್ರಪಕ್ಷಗಳಿಂದ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲಿ ಬಹುಮತದ ಗಡಿಯನ್ನು ದಾಟಿದೆ.
ಪ್ರತಿಪಕ್ಷ ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು ಕಂಡಿದೆ. ತೆಲಂಗಾಣದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಸಂಖ್ಯೆ 85ಕ್ಕೆ ಏರಿಕೆಯಾಗಿದೆ.
ಬಿಜೆಪಿಯಿಂದ 9, ಎನ್ ಡಿಎ ಮೈತ್ರಿಕೂಟದ ಅಜಿತ್ ಪವಾರ್ ಬಣದ ಎನ್ ಸಿಪಿ ಪಕ್ಷದ ಒಬ್ಬ ಸದಸ್ಯ ಹಾಗೂ ರಾಷ್ಟ್ರೀಯ ಲೋಕ್ ಮಂಚ್ ಪಕ್ಷದ ಒಬ್ಬ ಸದಸ್ಯ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಕ್ಷೇತರ 6 ಸದಸ್ಯರು ಬೆಂಬಲ ಸೇರಿದಂತೆ ಬಹುಮತಕ್ಕೆ ಅಗತ್ಯವಾದ ಗಡಿಯನ್ನು ತಲುಪಿದೆ. ರಾಜ್ಯಸಭೆಯಲ್ಲಿ ಬಿಜೆಪಿಯ ಬಲವು 96 ಕ್ಕೆ ಏರಿದ್ದು, ಎನ್‌ಡಿಎ ಈಗ ಒಟ್ಟು 121 ಸ್ಥಾನಗಳನ್ನು ಹೊಂದಿದೆ.
ರಾಜ್ಯಸಭೆಯು 245 ಸ್ಥಾನಗಳನ್ನು ಹೊಂದಿದೆ. ಪ್ರಸ್ತುತ 8 ಹುದ್ದೆಗಳು ಖಾಲಿ ಇವೆ. ಜಮ್ಮು ಮತ್ತು ಕಾಶ್ಮೀರದಿಂದ 4 ಮತ್ತು 4 ನಾಮನಿರ್ದೇಶಿತ ಸ್ಥಾನಗಳಿವೆ. ಬಹುಮತ ಸಾಬೀತುಪಡಿಸಲು 119 ಸ್ಥಾನಗಳ ಅಗತ್ಯವಿದೆ. ಮಿತ್ರಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಎನ್‌ಡಿಎ ಆ ಗಡಿಯನ್ನು ದಾಟಿದೆ.
ಅವಿರೋಧವಾಗಿ ಆಯ್ಕೆಯಾದ 12 ಅಭ್ಯರ್ಥಿಗಳು
ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಲ್ಲಿ ರಾಜಸ್ಥಾನದಿಂದ ರವನೀತ್ ಸಿಂಗ್ ಬಿಟ್ಟು, ಬಿಹಾರದಿಂದ ಮನನ್ ಕುಮಾರ್ ಮಿಶ್ರಾ, ಹರಿಯಾಣದಿಂದ ಕಿರಣ್ ಚೌಧರಿ, ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್, ಮಹಾರಾಷ್ಟ್ರದಿಂದ ಧೀರ್ಯಾ ಶೀಲ್ ಪಾಟೀಲ್, ತ್ರಿಪುರದಿಂದ ರಾಜೀವ್ ಭಟ್ಟಾಚಾರ್ಯ, ಒಡಿಶಾದಿಂದ ಮಮತಾ ಮೊಹಾಂತ, ಮಿಷನ್ ರಂಜನ್ ದಾಸ್ ಮತ್ತು ರಾಮೇಶ್ವರ್ ಸೇರಿದ್ದಾರೆ.
ಅಸ್ಸಾಂನಿಂದ ತೇಲಿ., ತೆಲಂಗಾಣದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಯಾದರು. ಎನ್‌ಸಿಪಿ ಅಜಿತ್ ಪವಾರ್ ಬಣದ ನಿತಿನ್ ಪಾಟೀಲ್ ಮಹಾರಾಷ್ಟ್ರದಿಂದ ಮತ್ತು ಆರ್‌ಎಲ್‌ಎಂನ ಉಪೇಂದ್ರ ಕುಶ್ವಾಹಾ ಬಿಹಾರದಿಂದ ಮೇಲ್ಮನೆಗೆ ಆಯ್ಕೆಯಾದರು.