ಬಸ್’ಗಳ ಮುಖಾಮುಖಿ ಡಿಕ್ಕಿ: 12 ಪ್ರಯಾಣಿಕರು ಸಾವು

Prasthutha|

ಭುವನೇಶ್ವರ: ಎರಡು ಬಸ್’ಗಳ ನಡುವೆ ಅಪಘಾತ ಸಂಭವಿಸಿ 12 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ಒಡಿಶಾದ ಗಂಜಂ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಘಟನೆಯಲ್ಲಿ 10 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಭರಮ್ಪುರದ ಎಂಕೆಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಗಂಜಂ ಜಿಲ್ಲೆಯ ದಿಗಪಾಹಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.


ಖಾಸಗಿ ಬಸ್ ಒಂದು ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಒಡಿಶಾ ಸಾರಿಗೆ ಇಲಾಖೆಯ ಬಸ್ ಗೆ ರಾತ್ರಿ 12 ಗಂಟೆ ಸುಮಾರು ಡಿಕ್ಕಿ ಹೊಡೆದಿದೆ. ಸಾರಿಗೆ ಬಸ್ ರಾಯಗಢ ಜಿಲ್ಲೆಯಿಂದ ಗಂಜಂಗೆ ತೆರಳುತ್ತಿತ್ತು.