ಮುಂಬೈ: ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ಆರೋಪದ ಮೇಲೆ 12 ಬಿಜೆಪಿ ಶಾಸಕರನ್ನು ಒಂದು ವರ್ಷದವರೆಗೆ ಅಮಾನತುಗೊಳಿಸುವ ಮಹಾರಾಷ್ಟ್ರ ವಿಧಾನಸಭೆಯ ನಿರ್ಣಯವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
“ಅಧಿವೇಶನದ ನಂತರ ಶಾಸಕರನ್ನು ಅಮಾನತುಗೊಳಿಸುವುದು ಅಸಂವಿಧಾನಿಕ ಮತ್ತು ಅನಿಯಂತ್ರಿತ” ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ.
ಅಧಿವೇಶನಕ್ಕೆ ಅಮಾನತುಗೊಳಿಸಬಹುದು ಎಂದು ನಿಯಮಗಳು ಹೇಳುತ್ತಿದ್ದರೂ, 12 ಶಾಸಕರನ್ನು ಅಧಿವೇಶನದ ನಂತರ ಒಂದು ವರ್ಷ ಅಮಾನತುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸಭಾಧ್ಯಕ್ಷರ ಪೀಠದಲ್ಲಿ ಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ನಂತರ ಅವರನ್ನು ಕಳೆದ ವರ್ಷ ಜುಲೈ 5 ರಂದು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತ್ತು