ಮುಝಾಫರ್ ನಗರ: ಮುಝಾಫರ್ ನಗರ ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ವಿಕ್ರಮ್ ಸಿಂಗ್ ಸೈನಿ ಸಹಿತ 12 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿರುವ ಕೋರ್ಟ್, ಎಲ್ಲಾ ಅಪರಾಧಿಗಳಿಗೆ ತಲಾ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ಜೈಲು ವಾಸದಿಂದ ಬಿಜೆಪಿ ಶಾಸಕನಿಗೆ ಮುಕ್ತಿ
ಮುಝಾಫರ್ ಗಲಭೆ ಪ್ರಕರಣದಲ್ಲಿ ದೋಷಿಯಾಗಿರುವ ವಿಕ್ರಮ್ ಸಿಂಗ್ ಸೈನಿ ಜೈಲು ವಾಸದಿಂದ ಮುಕ್ತಿ ಪಡೆದಿದ್ದಾರೆ. ವಿಕ್ರಮ್ ಸಿಂಗ್ ಸೈನಿ ದೋಷಿಯೆಂದು ಶಿಕ್ಷೆ ಪ್ರಮಾಣ ಘೋಷಿಸಿದ ಬೆನ್ನಲ್ಲೇ, ನ್ಯಾಯಾಲಯ ಜಾಮೀನು ನೀಡಿದೆ.
2013ರಲ್ಲಿ ಉತ್ತರಪ್ರದೇಶದ ಮುಝಾಫರ್ ನಗರದಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಈ ಗಲಭೆಯಲ್ಲಿ 62 ಮಂದಿ ಸಾವನ್ನಪ್ಪಿ, 90 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.