ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಓಟದ ಸಂದರ್ಭ 12 ಅಭ್ಯರ್ಥಿಗಳು ಸಾವು

Prasthutha|

ಜಾರ್ಖಂಡ್: ಜಾರ್ಖಂಡ್ ರಾಜ್ಯದ ಅಬಕಾರಿ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ನೇಮಕಾತಿ ಸಂದರ್ಭ 12 ಅಭ್ಯರ್ಥಿಗಳು 10 ಕಿ.ಮೀ. ಓಟದ ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದಾಗ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

- Advertisement -

ಲಿಖಿತ ಪರೀಕ್ಷೆಯ ಮೊದಲು ನಡೆಯುತ್ತಿದ್ದ ದೈಹಿಕ ಪರೀಕ್ಷೆಯಲ್ಲಿ ಸ್ಪರ್ಧಾಳುಗಳಿಗೆ ಪ್ರತಿ ಬಾರಿಯು 1.6 ಕಿ.ಮೀ. ಓಟವಿರುತಿತ್ತು. ಆದರೆ ಈ ಬಾರಿಗೆ ಅಭ್ಯರ್ಥಿಗಳು 10 ಕಿಮೀ ಓಡಬೇಕು ಎಂಬ ನಿಯಮ ರೂಪಿಸಲಾಗಿತ್ತು. ಈ‌ ನಿಯಮವೇ ಸಾವಿಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅಮರೇಶ್ ಕುಮಾರ್, ಪ್ರದೀಪ್ ಕುಮಾರ್, ಅಜಯ್ ಮಹತೋ, ಅರುಣ್ ಕುಮಾರ್ ಮತ್ತು ದೀಪಕ್ ಕುಮಾರ್ ಪಾಂಡು, ಮನೋಜ್ ಕುಮಾರ್ ಮತ್ತು ಸೂರಜ್ ಕುಮಾರ್ ವರ್ಮಾ, ವಿಕಾಸ್ ಲಿಂಡಾ ಮತ್ತು ಸುಮಿತ್ ಯಾದವ್ ಮೃತರು. ಮೃತ ಸ್ಪರ್ಧಾಳುಗಳು 19 ರಿಂದ 31 ವಯಸ್ಸಿವರಾಗಿದ್ದಾರೆ. ಇನ್ನುಳಿದ ಮೂವರ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ.

- Advertisement -

ಸರ್ಕಾರಿ ಮೂಲಗಳ ಪ್ರಕಾರ 2000 ದಲ್ಲಿ ರಾಜ್ಯ ವಿಭಜನೆಯ ನಂತರ ಮೊದಲ ಬಾರಿಗೆ ಜಾರ್ಖಂಡ್ ರಾಜ್ಯದಲ್ಲಿನ ಅಬಕಾರಿ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ನೇಮಕಾತಿ ನಡೆಸಲಾಗುತ್ತಿದೆ. 2008 ಮತ್ತು 2019 ರಲ್ಲಿ ನಡೆದಿದ್ದರೂ ಇದುವರೆಗೂ ಯಾವುದೇ ನೇಮಕಾತಿಗಳು ಪೂರ್ಣವಾಗಿಲ್ಲ. ಪ್ರಸಕ್ತ ಸಾಲಿನ ಅಬಕಾರಿ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 1.87 ಲಕ್ಷ ಸ್ಪರ್ಧಾಳುಗಳು ದೈಹಿಕ ಪರೀಕ್ಷೆ ಭಾಗವಹಿಸಿದ್ದು, 1.17 ಲಕ್ಷ ಸ್ಪರ್ಧಾಳುಗಳು ಲಿಖಿತ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

60 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸಿದ ಅರ್ಹ ಸ್ಪರ್ಧಾಳುಗಳು ನೇಮಕಾತಿ ಪ್ರಕ್ರಿಯ ನಂತರ ಲಿಖಿತ ಪರೀಕ್ಷೆ ಹಾಗೂ ಅಂತಿಮವಾಗಿ ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸುತ್ತಾರೆ. ಆದರೆ ಲಿಖಿತ ಪರೀಕ್ಷೆಗೂ ಮೊದಲು ದೈಹಿಕ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಸರಿಯಾಗಿ ತಗೆದುಕೊಂಡಿರಲಿಲ್ಲ. ಜೊತೆಗೆ ದೈಹಿಕ ಪರೀಕ್ಷೆಯ ಮೌಲ್ಯಮಾಪನ ನಿಯಮಗಳಲ್ಲಿ ಭಾರೀ ಬದಲಾವಣೆಯು ಸಾವಿಗೆ ಕಾರಣ ಎನ್ನಲಾಗುತ್ತಿದೆ.



Join Whatsapp