ಪಾಕಿಸ್ತಾನದಲ್ಲಿ ಭೂಕಂಪನ: 13 ಮಂದಿ ಸಾವು; ಭಾರತದಲ್ಲೂ ಕಂಪಿಸಿದ ಭೂಮಿ

Prasthutha|

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಳೆದ ರಾತ್ರಿ ಪ್ರಬಲ ಭೂಕಂಪನ  ಸಂಭವಿಸಿದ್ದು ಕನಿಷ್ಠ 13 ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

- Advertisement -

ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ ಕನಿಷ್ಠ 13 ಜನರು ಭೂಕಂಪನದಿಂದಾಗಿ ಸಾವನ್ನಪ್ಪಿದ್ದಾರೆ. ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶ ಎಂದು ಪಿಎಂಡಿ ಹೇಳಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8 ಇದೆ.

ಭಾರತದಲ್ಲೂ ಭೂಕಂಪನ ಪ್ರಭಾವ ಕಂಡುಬಂದಿದೆ. ದೆಹಲಿ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರದಲ್ಲೂ ಭೂಮಿ ಕಂಪಿಸದ ಬಗ್ಗೆ ವರದಿಯಾಗಿದೆ. ಭಾರತ ತುರ್ಕೆಮೆನಿಸ್ತಾನ, ಕಜಕಿಸ್ತಾನ, ಪಾಕಿಸ್ತಾನ, ತಜಕಿಸ್ತಾನ, ಉಜ್ಬೆಕಿಸ್ತಾನ, ಚೀನಾ, ಕಿರ್ತಿಸ್ತಾನಗಳಲ್ಲೂ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ.

Join Whatsapp