ಸಿಪಿಐಗೆ 11 ಕೋಟಿ ರೂ. ಪಾವತಿಸಲು ಹೇಳಿದ ಆದಾಯ ತೆರಿಗೆ ಇಲಾಖೆ

Prasthutha|

ನವದೆಹಲಿ: ಆದಾಯ ತೆರಿಗೆ ಇಲಾಖೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ಕ್ಕೂ ನೋಟಿಸ್ ನೀಡಿದ್ದು,11 ಕೋಟಿ ರೂ. ಪಾವತಿಸಲು ಹೇಳಿದೆ.

- Advertisement -

ಕಳೆದ ಕೆಲವು ವರ್ಷಗಳಿಂದ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಹಳೆಯ ಪ್ಯಾನ್ ಕಾರ್ಡ್ ಬಳಸಿದ್ದಕ್ಕಾಗಿ 11 ಕೋಟಿ ರೂ. ಬಾಕಿ ಪಾವತಿಸುವಂತೆ ಕೇಳಿದೆ ಎಂದು ವರದಿಯಾಗಿದೆ. ತೆರಿಗೆ ಇಲಾಖೆ ಅಧಿಕಾರಿಗಳ ಸೂಚನೆಯನ್ನು ಪ್ರಶ್ನಿಸಲು ಎಡಪಕ್ಷವು ತನ್ನ ವಕೀಲರನ್ನು ಸಂಪರ್ಕಿಸುತ್ತಿದೆ ಎಂದು ತಿಳಿದು ಬಂದಿದೆ.

ಕಳೆದ 72 ಗಂಟೆಗಳಲ್ಲಿ ತನಗೆ 11 ಐಟಿ ನೋಟಿಸ್‌ಗಳು ಬಂದಿವೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ.

- Advertisement -



Join Whatsapp