ಮುಷ್ಕರ ಕೈಬಿಟ್ಟ ‘108’ ಸಿಬ್ಬಂದಿ

Prasthutha|

ಬೆಂಗಳೂರು: ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ‘108’ ಆಯಂಬುಲೆನ್ಸ್‌ ಸಿಬ್ಬಂದಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ರಾಜ್ಯವ್ಯಾಪಿ ಮುಷ್ಕರದ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.

- Advertisement -

ಆರೋಗ್ಯ ಇಲಾಖೆ ಆಯುಕ್ತ ಡಾ. ರಣದೀಪ್‌ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಭಾಗವಹಿಸಿದ 108 ಸಿಬ್ಬಂದಿ, ತಮ್ಮ ಸಮಸ್ಯೆಯನ್ನು ಸರಕಾರಕ್ಕೆ ವಿವರಿಸಿ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಆಯುಕ್ತರು, ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ. ಸಿಬ್ಬಂದಿ ವೇತನ ಪಾವತಿ ಮಾಡಬೇಕಿರುವ ಜಿವಿಕೆ ಇಎಂಆರ್‌ ಸಂಸ್ಥೆಯಿಂದ ಸಮಸ್ಯೆಗಳಾಗಿದ್ದರೆ, ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಬೇಕು. ಇದಕ್ಕೆ ಸರಕಾರ ಸಹಕಾರ ಕೊಡಲಿದೆ ಎಂದು ಹೇಳಿದರು.

ಈ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸರಕಾರದಿಂದ ಯಾವುದೇ ವೇತನ ಬಾಕಿ ಇಲ್ಲ. ಸಂಸ್ಥೆ ಜತೆಗೆ ಒಡಂಬಡಿಕೆಯ ಪ್ರಕಾರ ಸರಕಾರದಿಂದ ಕೊಡಬೇಕಾದ ಅನುದಾನವನ್ನು ಪಾವತಿಸಲಾಗಿದೆ. ಯೋಜನೆ ನಿರ್ವಹಿಸುತ್ತಿರುವ ಜಿವಿಕೆ ಇಎಂಆರ್‌ ಸಂಸ್ಥೆ ವೇತನ ಬಾಕಿಯಿರಿಸಿದೆ ಪ್ರತ್ಯೇಕ ಪ್ರಕಟನೆ ಹೊರಡಿಸಿದ್ದಾರೆ.

- Advertisement -

ಆರೋಗ್ಯ ಇಲಾಖೆ ವಲಯವಾರು ವೇತನ ಪಾವತಿಯನ್ನು ತಡೆಹಿಡಿದು, ರಾಜ್ಯಾದ್ಯಂತ ಏಕ ರೂಪದ ವೇತನ ಪಾವತಿಸುವಂತೆ ಜಿವಿಕೆ ಇಎಂಆರ್‌ ಸಂಸ್ಥೆಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಬಾಕಿ ಹಾಗೂ ಕಡಿತಗೊಂಡ ವೇತನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಆಯಂಬುಲೆನ್ಸ್‌ ನೌಕರ ಸಂಘದ ಉಪಾಧ್ಯಕ್ಷ ಪರಮ ಶಿವಯ್ಯ ಹೇಳಿದರು.



Join Whatsapp