ಪಶ್ಚಿಮ ಕಾಂಬೋಡಿಯಾದ ಅರಣ್ಯದಲ್ಲಿ 106 ಅಪರೂಪದ ಮೊಸಳೆ ಮೊಟ್ಟೆಗಳು ಪತ್ತೆ

Prasthutha|

ಪನ್ನೊಮ್‌ ಪೆನ್ಹಾ (ಕಾಂಬೋಡಿಯಾ): ಇಲ್ಲಿನ ಪಶ್ಚಿಮ ಕಾಂಬೋಡಿಯಾದ ವನ್ಯಜೀವಿ ಅಭಯಾರಣ್ಯದಲ್ಲಿ ವನ್ಯಜೀವಿ ಸಂಶೋಧಕರ ತಂಡ ಅತ್ಯಂತ ಅಪರೂಪದ ‘ಸಿಯಾಮಿಸ್‌’ ಪ್ರಬೇಧದ ಮೊಸಳೆಗಳ 106 ಮೊಟ್ಟೆಗಳನ್ನು ಪತ್ತೆ ಮಾಡಿದ್ದಾರೆ.

- Advertisement -

ಕಳೆದ 20 ವರ್ಷಗಳಲ್ಲಿಯೇ ಇದು ಅತೀ ದೊಡ್ಡದಾದ ಆವಿಷ್ಕಾರವಾಗಿದೆ. ವಿಶ್ವದ ಅಪರೂಪದ ಮೊಸಳೆ ಪ್ರಬೇಧಗಳ ಸಂರಕ್ಷಣೆಯ ವಿಚಾರದಲ್ಲಿ ಹೊಸ ಆಶಾಭಾವ ಸೃಷ್ಟಿಸಿದೆ ಎಂದು ಸಂಶೋಧಕರು ಪ್ರತಿಕ್ರಿಯಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ‘ಕಾರ್ಡಮಂಮ್‌ ರಾಷ್ಟ್ರೀಯ ಉದ್ಯಾನದಲ್ಲಿ ಸಂಶೋಧಕರು ಇದನ್ನು ಪತ್ತೆಹಚ್ಚಿದ್ದಾರೆ. ಜೂನ್‌ 27ರಿಂದ 30ರ ನಡುವೆ 60 ಮೊಟ್ಟೆ ಒಡೆದು ಮರಿಗಳು ಹೊರಬಂದಿದೆ ಎಂದು ಇಲ್ಲಿನ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಸಂಶೋಧಕರ ತಂಡ ತಿಳಿಸಿದೆ.

- Advertisement -

ಮೊಟ್ಟೆ ಪತ್ತೆಯಾದ ಜಾಗವು ಅವುಗಳ ಆವಾಸಸ್ಥಾನವಾಗಿದ್ದು, ಅವುಗಳ ಚೇತರಿಕೆಗೆ ಹೊಸ ಭರವಸೆ ಮೂಡಿಸಿದೆ. ಈ ಜಾಗವು ಕಾರ್ಡಮಂಮ್‌ ಉದ್ಯಾನದ ರಕ್ಷಣಾ ರೇಂಜರ್‌ಗಳ ನಿಗಾದಲ್ಲಿದೆ ಎಂದು ತಿಳಿಸಿದೆ.
ಜಗತ್ತಿನಲ್ಲಿ 1 ಸಾವಿರ ‘ಸಿಯಾಮಿಸ್‌’ ಮೊಸಳೆಗಳು ಉಳಿದಿದ್ದು, ಈ ಪೈಕಿ 300 ಮೊಸಳೆಗಳು ಕಾಂಬೋಡಿಯಾದಲ್ಲಿದೆ.



Join Whatsapp