ನನ್ನ ಅವಧಿ ಮುಗಿಯುವಷ್ಟರಲ್ಲಿ ಮುಸ್ಲಿಮ್ ಅನುದಾನ 10 ಸಾವಿರ ಕೋಟಿ ಮಾಡುವೆ: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ನನ್ನ ಅವಧಿ ಮುಗಿಯುವಷ್ಟರಲ್ಲಿ ಮುಸ್ಲಿಮ್ ಅನುದಾನ 10 ಸಾವಿರ ಕೋಟಿ ಮಾಡುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

- Advertisement -

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದಿಂದ ಅಭಿವೃದ್ಧಿಗೆ ಹಣ ಬೇಡಿಕೆ ವಿಚಾರ ‘ಮೊದಲು 400 ಕೋಟಿ ಇತ್ತು, ನಂತರ ಅದನ್ನು ನಾನು 2 ಸಾವಿರ ಕೋಟಿಗೆ ಮಾಡಿದೆ. ಆವಾಗ ಕೂಡ ನನ್ನ ಯಾರು ಕೇಳಿರಲಿಲ್ಲ, ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡ್ತೀನಿ. ಮುಂದೆ ನನ್ನ ಅವಧಿ ಮುಗಿವ ಅಷ್ಟರಲ್ಲಿ 10 ಸಾವಿರ ಕೋಟಿ ಮಾಡುತ್ತೇನೆ, ಅದು ನನ್ನ ಕೆಲಸ. ರಾಜ್ಯದಲ್ಲಿ ನಾವು ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಸಂಪತ್ತು ಪ್ರತಿಯೊಬ್ಬರಿಗೂ ಸಿಗಬೇಕು ಎಂದರು.


ರಾಜಕೀಯ ಪಕ್ಷದ ಶಕ್ತಿ ಇದ್ದರೂ ಕ್ರಮಕೈಗೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಹಿಂದೂ, ಮುಸ್ಲಿಂ ಅಥವಾ ಮೈನಾರಿಟಿ ಇರಬಹುದು. ನಮ್ಮ ಸರ್ಕಾರ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತದೆ ಎಂದರು.

Join Whatsapp