ಬೆಂಗಳೂರು: ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ದಾಸರಹಳ್ಳಿ ಮಾಜಿ ಎಂಎಲ್ ಎ ಮುನಿರಾಜು ಅವರು 1998 ರಲ್ಲಿ ಬೇರೆ ಕಡೆಯಿಂದ 1000 ಕಾರ್ಯಕರ್ತರು ಬೆಳಗ್ಗೆ 7 ಗಂಟೆಗೆ ಬಂದು ಐದೈದು ಹತ್ತತ್ತು ಮತ ಹಾಕಿದ್ದರಿಂದ ಈಗ 119 ಸೀಟ್ ಬಿಜೆಪಿಗೆ ಪಡೆಯಲು ಸಾಧ್ಯವಾಯಿತು ಎಂದು ಹೇಳುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಏರಿದ ಕಳ್ಳದಾರಿಯನ್ನು ಬಹಿರಂಗಪಡಿಸಿದ್ದಾರೆ.
1998 ರ ಬೈ ಎಲೆಕ್ಷನಿನಲ್ಲಿ ಬಿಜೆಪಿಯಲ್ಲಿ ಯಾರೂ ಇರಲಿಲ್ಲ, ಒಂದೆರಡು ಜನ ಮಾತ್ರ ಇದ್ದರು. ಆಗ ಯಲಹಂಕ ಕ್ಷೇತ್ರದಿಂದ ಒಂದು ಸಾವಿರ ಕಾರ್ಯಕರ್ತರು ಬಂದು ಬೆಳಗ್ಗೆ 7 ಗಂಟೆಯ ವೇಳೆಗೆ ಐದೈದು ಹತ್ತತ್ತು ಮತ ಹಾಕಿದ್ದರು. ಆ ರೀತಿ ಪಕ್ಷ ಕಟ್ಟಿದ್ದರಿಂದ ಇಬ್ಬರೇ ಇದ್ದಂತಹ ಬಿಜೆಪಿಯ ವಿಧಾನಸಭೆ ಸದಸ್ಯರು ಇವತ್ತು 119 ಸದಸ್ಯರಾಗಿ ಬಂದು ನಾವು ಸರಕಾರ ಕಟ್ಟಿದ್ದೇವೆ ಎಂದಿದ್ದಾರೆ.
ಈ ವೀಡಿಯೋವನ್ನು ಹಂಚುತ್ತಾ ಟ್ವೀಟ್ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ , ಒಂದು ಸಾವಿರ ಜನ ಕಾರ್ಯಕರ್ತರು ಬಂದು… ಐದೈದು, ಹತ್ತತ್ತು ಓಟ್ ಹಾಕಿದ್ರು. ಆ ರೀತಿ ಪಕ್ಷ ಕಟ್ಟಿದ್ದಕ್ಕೆ…. ಇವತ್ತು 119 ವಿಧಾನಸಭಾ ಸದಸ್ಯರನ್ನು ಇಟ್ಕೊಂಡು ಸರ್ಕಾರ ಮಾಡಿದ್ದೇವೆ..ಏನಿದು ರಹಸ್ಯ? ಅಸಹ್ಯ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಈ ಪೋಸ್ಟನ್ನು ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ನಳಿನ್ ಕುಮಾರ್, ಹಾಗೂ ಸಿಎಂ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.