ರಾಹುಲ್ ಗಾಂಧಿ ವಿರುದ್ಧ 1,000 ದೂರು ದಾಖಲು: ಅಸ್ಸಾಂ ಬಿಜೆಪಿ ಯುವ ಮೋರ್ಚಾ

Prasthutha|

ಗುವಾಹಟಿ: ಒಂದು ಟ್ವೀಟ್ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂನ ವಿವಿಧ ಪೊಲೀಸ್ ಠಾಣೆಗಳಲ್ಲಿ 1,000 ಕ್ಕೂ ಹೆಚ್ಚು ದೂರುಗಳನ್ನು ಕಾರ್ಯಕರ್ತರು ದಾಖಲಿಸಿದ್ದಾರೆ ಎಂದು ಅಸ್ಸಾಂ ಬಿಜೆಪಿ ಯುವ ಮೋರ್ಚಾ ಹೇಳಿದೆ. 

- Advertisement -

ರಾಹುಲ್ ಗಾಂಧಿ ವಿರುದ್ಧ ಮೋರ್ಚಾದ ಕಾರ್ಯಕರ್ತರು 1000 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ ಎಂದು ಅಸ್ಸಾಂ ಬಿಜೆವೈಎಂ ಮಾಧ್ಯಮ ಸಂಚಾಲಕ ಬಿಸ್ವಜಿತ್ ಖೌಂಡ್  ಹೇಳಿಕೆ ಮೂಲಕ ತಿಳಿಸಿದ್ದಾರೆ.  ಆದರೆ, ದೂರು ದಾಖು ಮಾಡಿದ ಪೊಲೀಸ್ ಠಾಣೆಗಳು ಅಥವಾ ಜಿಲ್ಲೆಗಳ ಹೆಸರುಗಳು ಅಥವಾ ಯಾವುದೇ ವಿವರವನ್ನು ಹಂಚಿಕೊಂಡಿಲ್ಲ.

ಅರುಣಾಚಲ ಪ್ರದೇಶವು ತನ್ನ ಭಾಗವಾಗಿದೆ ಎಂಬ ಚೀನಾದ ಹೇಳಿಕೆಯನ್ನು ರಾಹುಲ್ ಗಾಂಧಿ ಅವರ ಟ್ವೀಟ್ ಒಂದು ಪರೋಕ್ಷವಾಗಿ ಬೆಂಬಲಿಸುತ್ತದೆ ಎಂದು ಪೊಲೀಸರಿಗೆ ಸಲ್ಲಿಸಿದ ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ದೂರಿನಲ್ಲಿ ಬಿಜೆವೈಎಂ ಆರೋಪಿಸಿದೆ.

Join Whatsapp