ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ 100ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆ ಗುಜರಾತ್ ರಾಜಧಾನಿ ಗಾಂಧಿನಗರದ ರಸ್ತೆಯೊಂದಕ್ಕೆ ಅವರ ಹೆಸರು ಇಡಲಾಗಿದೆ.
ಮುಂದಿನ ಪೀಳಿಗೆ ಮೋದಿ ತಾಯಿ ಹೀರಾಬೆನ್ ಅವರಿಂದ ಪ್ರೇರಣೆ ಪಡೆಯುವ ಸಲುವಾಗಿ ರಾಯ್ಸನ್ ಪ್ರದೇಶದ 80 ಮೀಟರ್ ರಸ್ತೆಗೆ ಹಿರಾಬಾ ಮಾರ್ಗ್ ಎಂದು ನಾಮಕರಣ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಗಾಂಧಿನಗರ ಮೇಯರ್ ಹಿತೇಶ್ ಮಕ್ವಾನಾ ತಿಳಿಸಿದ್ದಾರೆ.
ಹೀರಾಬೆನ್ ಅವರು ಪ್ರಧಾನಿಯ ತಮ್ಮ ಪಂಕಜ್ ಮೋದಿ ಜತೆ ಗಾಂಧಿನಗರದ ಹೊರವಲಯದ ರಾಯ್ಸನ್ ಗ್ರಾಮದಲ್ಲಿ ವಾಸವಿದ್ದಾರೆ. ಈ ಪ್ರದೇಶ ಬಿಜೆಪಿ ಆಡಳಿತದ ಗಾಂಧಿನಗರ ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ.