ಜೈ ಶ್ರೀರಾಮ್ ಘೋಷಣೆ ಕೂಗಲು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತನಿಂದ 10 ವರ್ಷದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ

Prasthutha|

 ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಲು ಒತ್ತಾಯಿಸಿ 10 ವರ್ಷದ ಬಾಲಕನನ್ನು ಬಿಜೆಪಿ ಕಾರ್ಯಕರ್ತ ಥಳಿಸಿದ ಘಟನೆ  ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಫುಲಿಯಾದಲ್ಲಿ ನಡೆದಿದೆ.

4 ನೇ ತರಗತಿ ವಿದ್ಯಾರ್ಥಿಯಾದ ಮಹಾದೇವ್ ಶರ್ಮಾಗೆ ಹಲ್ಲೆಯಿಂದಾಗಿ ತೀವ್ರ ತರದ ಗಾಯಗಳಾಗಿದ್ದು, ರಣಘಾಟ್ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟೆಲೆಗ್ರಾಫ್ ಇಂಡಿಯಾ ವರದಿ ಮಾಡಿದೆ

- Advertisement -

ಆರೋಪಿಯನ್ನು ಬಿಜೆಪಿಯ ಮಹಿಳಾ ವಿಭಾಗದ ಸ್ಥಳೀಯ ಮುಖ್ಯಸ್ಥೆ ಮಿಥು ಪ್ರಮಣಿಕ್ ಅವರ ಪತಿ ಮಹಾದೇವ್ ಪ್ರಮಣಿಕ್ ಎಂದು ಗುರುತಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡ ಬಾಲಕ ತೃಣಮೂಲ ಕಾಂಗ್ರೆಸ್ ಬೆಂಬಲಿಗನಾಗಿರುವ ಬಡಗಿಯೊಬ್ಬನ ಮಗ ಎಂದು ಪೊಲೀಸರು ಹೇಳಿದ್ದಾರೆ.

ಬಲವಂತವಾಗಿ ಜೈಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಬಾಲಕನ ಮೇಲೆ ಆರೋಪಿ ಪ್ರಮಣಿಕ್ ತೀವ್ರ ತರದ ಹಲ್ಲೆ ನಡೆಸಿದ್ದಾನೆಂದು ಪ್ರತ್ಯಕ್ಷದರ್ಶಿ ಹೇಳಿರುವುದಾಗಿ ಟೆಲೆಗ್ರಾಫ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ.

ಬಾಲಕನ ಮುಖ, ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ ಮತ್ತು ಸಿ.ಟಿ ಸ್ಕ್ಯಾನ್‌ಗೆ ಸೂಚಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

- Advertisement -