ಆತ್ಮಹತ್ಯೆಗೂ ದೆಹಲಿಯೇ ರಾಜಧಾನಿ; ಚೆನ್ನೈ ದ್ವಿತೀಯ

Prasthutha|

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೇಶದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಶೇಕಡಾ 10 ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ ವರದಿ ಮಾಡಿದೆ.

- Advertisement -

2020 ರಲ್ಲಿ 1,53,052 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ವರದಿಯಾಗಿದೆ.
ದೆಹಲಿಯಲ್ಲಿ 3025 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೆನ್ನೈನಲ್ಲಿ 2430, ಬೆಂಗಳೂರಿನಲ್ಲಿ 2196 ಮತ್ತು ಮುಂಬೈನಲ್ಲಿ 1282 ಆತ್ಮಹತ್ಯೆಗಳು ವರದಿಯಾಗಿವೆ.
ದೇಶದ 37.4 ಶೇ. ಆತ್ಮಹತ್ಯೆಗಳು ಈ ನಾಲ್ಕು ನಗರಗಳಲ್ಲಿ ನಡೆದಿವೆ.
ಕುಟುಂಬದ ಸಮಸ್ಯೆಗಳು ಮತ್ತು ಅನಾರೋಗ್ಯ ಆತ್ಮಹತ್ಯೆಗಳಿಗೆ ಕಾರಣವಾಗಿದ್ದು, ದಿನಗೂಲಿ ನೌಕರರು, ಸ್ವಯಂ ಉದ್ಯೋಗಿಗಳು ಮತ್ತು ಗೃಹಿಣಿಯರು ಹೆಚ್ಚು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕ್ರೈಮ್ ರೆಕಾರ್ಡ್ಸ್ ಬ್ಯೂರೋ ವರದಿ ಮಾಡಿದೆ.



Join Whatsapp