10 ನಿಮಿಷದಲ್ಲಿ ಡೆಲಿವರಿ: ಯೋಜನೆಯನ್ನು ಕೈಬಿಡಿ ಎಂದು Zomato ಗೆ ಮಧ್ಯ ಪ್ರದೇಶ ಸರ್ಕಾರ ಸೂಚನೆ

Prasthutha|

ಭೋಪಾಲ್:  10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಆಹಾರವನ್ನು ತಲುಪಿಸುವ ಭರವಸೆ ನೀಡಿರುವ ಆಹಾರ ವಿತರಣಾ ಕಂಪನಿ ಝೊಮ್ಯಾಟೊದ ವಿರುದ್ಧ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಈ ತ್ವರಿತ ವಿತರಣಾ ಯೋಜನೆಯನ್ನು ಬದಲಾಯಿಸುವಂತೆ ಕಂಪನಿಗೆ ಸೂಚಿಸಿದ್ದಾರೆ.

- Advertisement -

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಲು ಝೊಮ್ಯಾಟೊಗೆ ಅವಕಾಶ ನೀಡುವುದಿಲ್ಲ ಮತ್ತು ತ್ವರಿತ ವಿತರಣೆ ಪ್ರಕ್ರಿಯೆಯಲ್ಲಿ ಸಂಭವಿಸುವ ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಅಪಘಾತಗಳಿಗೆ ಕಂಪನಿಯೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

“10 ನಿಮಿಷಗಳಲ್ಲಿ ಆಹಾರವನ್ನು ತಲುಪಿಸುವ ಝೊಮ್ಯಾಟೊ ಯೋಜನೆಯು ತನ್ನ ಉದ್ಯೋಗಿಗಳ(ವಿತರಣಾ ಪಾಲುದಾರರು) ಮತ್ತು ಇತರ ಜನರ ಜೀವನದ ಜೊತೆ ಆಟವಾಡುವಂತಿದೆ. ಝೊಮ್ಯಾಟೊ ಬಿಡಿ, ಮಧ್ಯಪ್ರದೇಶದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಾನು ಈ ಯೋಜನೆಗಳನ್ನು ಬದಲಾಯಿಸಲು ಝೊಮ್ಯಾಟೊಗೆ ಸಲಹೆ ನೀಡುತ್ತಿದ್ದೇನೆ” ಎಂದು ಮಿಶ್ರಾ ಹೇಳಿದ್ದಾರೆ.

Join Whatsapp