ಟೆಕ್ಸಾಸ್ ನಲ್ಲಿ ವಲಸಿಗರನ್ನು ಸಾಗಿಸುತ್ತಿದ್ದ ವ್ಯಾನ್ ಪಲ್ಟಿಯಾಗಿ 10 ಸಾವು

Prasthutha|

ವಾಷಿಂಗ್ಟನ್ : 30 ಜನರನ್ನು ಹೇರಿಕೊಂಡು ತೆರಳುತ್ತಿದ್ದ ವ್ಯಾನ್ ವೊಂದು ಅಪಘಾತಕ್ಕೀಡಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿ ಇತರ 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೇರಿಕಾದ ದಕ್ಷಿಣ ಟೆಕ್ಸಾಸ್ ನಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಪ್ರಯಾಣಿಕರಲ್ಲಿ ಹೆಚ್ಚಿನವರು ಅಕ್ರಮ ವಲಸಿಗರೆಂದು ಮೂಲಗಳು ಖಚಿತ ಪಡಿಸಿದೆ. ಈ ವ್ಯಾನ್ ಹೆದ್ದಾರಿ 281 ರಲ್ಲಿ ಟೆಕ್ಸಾಸ್ ನ ಮೆಕ್ ಅಲೆನ್ ನಿಂದ ಉತ್ತರಕ್ಕೆ 50 ಮೈಲುಗಳಷ್ಟು ದೂರದಲ್ಲಿ ಚಲಿಸಿ ರಸ್ತೆಯಲ್ಲಿದ್ದ ಲೋಹದ ಕಂಬಕ್ಕೆ ಡಿಕ್ಕಿಯಾಗಿ ಉರುಳಿಬಿದ್ದು ಈ ಭೀಕರ ಅಪಘಾತ ಸಂಭವಿಸಿದೆ.


ದುರ್ಘಟನೆಯ ಪರಿಣಾಮ ವಾಹನದ ಚಾಲಕ ಸೇರಿದಂತೆ ಒಂಬತ್ತು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅದೇ ರೀತಿ ಗಾಯಗೊಂಡ ಇತರ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಹೆಚ್ಚಿನವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆಯೆಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿದೆ. ಈ ದುರ್ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp