ಹೆದ್ದಾರಿ ಬದಿಯ ಹೋಟೆಲ್’ಗೆ ಟ್ರಕ್ ಡಿಕ್ಕಿ: 10 ಮಂದಿ ಮೃತ್ಯು

Prasthutha|

ಮುಂಬೈ: ಕಂಟೈನರ್ ಟ್ರಕ್ ವೊಂದು ಹೆದ್ದಾರಿ ಬದಿಯ ಹೋಟೆಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಧುಲೆ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದಿದೆ.

- Advertisement -


ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆದ್ದಾರಿಯ ಮಧ್ಯೆ ಟ್ರಕ್ ನ ಬ್ರೇಕ್ ಫೇಲ್ ಆಗಿದ್ದು, ವಾಹನವನ್ನು ನಿಯಂತ್ರಿಸಲು ಚಾಲಕ ವಿಫಲನಾಗಿದ್ದಾನೆ. ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್ ನಂತರ ಹೆದ್ದಾರಿಯ ಬದಿಯಲ್ಲಿರುವ ಬಸ್ ನಿಲ್ದಾಣದ ಸಮೀಪದ ಹೋಟೆಲ್ವೊಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಗಾಯಾಳುಗಳನ್ನು ಶಿರ್ಪುರ ಮತ್ತು ಧುಲೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

Join Whatsapp