10 ಕಿ.ಮೀ ಓಟದಲ್ಲಿ ಭಾಗವಹಿಸಿ ಗುರಿ ತಲುಪಿದ 5 ತಿಂಗಳ ಗರ್ಭಿಣಿ

Prasthutha|

ಬೆಂಗಳೂರು: ಅಂಕಿತಾ ಗೌರ್ ಎಂಬ 5 ಗರ್ಭಿಣಿ, ಭಾನುವಾರ ನಡೆದ ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು 2020 ಓಟದ ಸ್ಪರ್ಧೆಯಲ್ಲಿ ಕೇವಲ 62 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮಹತ್ತರ ಸಾಧನೆ ಮಾಡಿದ್ದಾರೆ.

- Advertisement -

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅವರು, “ಇದು ಕಳೆದ ಒಂಬತ್ತು ವರ್ಷಗಳಿಂದ ನಾನು ಮಾಡುತ್ತಿರುವ ಪ್ರಯತ್ನದ ಫಲ. ಪ್ರತಿದಿನ ಬೆಳಿಗ್ಗೆ ನಾನು ಓಡುತ್ತೇನೆ. ಓಡುವುದು ನಿಜಕ್ಕೂ ತುಂಬಾ ಸುರಕ್ಷಿತವಾಗಿದೆ. ಅದರಲ್ಲಿಯೂ ಗರ್ಭಿಣಿಯಾಗಿ ಓಡುವುದು ಉತ್ತಮ ವ್ಯಾಯಾಮ. ಅಲ್ಲದೆ, ನೀವು ಅಮೆರಿಕನ್ ಕೌನ್ಸಿಲ್ ಆಫ್ ಹೆಲ್ತ್ ಅನ್ನು ಒಪ್ಪುವಿರಾದರೆ ಗರ್ಭಿಣಿಯು ಓಟಗಾರ್ತಿಯಾದರೆ ಅದು ಅತ್ಯುತ್ತಮ ಬೆಳವಣಿಗೆ” ಎಂದು ಹೇಳಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ನಿಯಮಿತವಾಗಿ ಓಟದಲ್ಲಿ ಭಾಗವಹಿಸುತ್ತಿದ್ದ ಅವರು, 2013 ರಿಂದ ಟಿಸಿಎಸ್ ವರ್ಲ್ಡ್ 10 ಕೆ ನಲ್ಲಿ ಭಾಗವಹಿಸುತ್ತಿದ್ದು, ಬರ್ಲಿನ್ (ಮೂರು ಬಾರಿ), ಬೋಸ್ಟನ್, ಮತ್ತು ನ್ಯೂಯಾರ್ಕ್ ನಂತಹ 5-6 ಅಂತರರಾಷ್ಟ್ರೀಯ ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದಾರೆ.

- Advertisement -

“ಟಿಸಿಎಸ್ ವರ್ಲ್ಡ್ 10 ಕೆ ಯಲ್ಲಿ ಭಾಗವಹಿಸುವ ನಿರ್ಧಾರಕ್ಕೆ ಸ್ತ್ರೀರೋಗತಜ್ಞರ ಸಲಹೆ ಕೇಳಿದಾಗ ಸಂಪೂರ್ಣವಾಗಿ ಆರೋಗ್ಯಕರವಾಗಿದೆ. ಆದರೆ ವೇಗವಾಗಿ ಓಡಬಾರದೆಂದು ನನ್ನ ವೈದ್ಯರು ಹೇಳಿದ್ದಾರೆ. ತನ್ನ ತಂದೆ-ತಾಯಿ ಸೇರಿದಂತೆ ಪತಿಯು ಕೂಡ ಕ್ರೀಡೆಯೊಂದಿಗೆ ಮುಂದುವರಿಯಲು ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಹಾಗಾಗಿ ನಾನು ತುಂಬಾ ಅದೃಷ್ಟಶಾಲಿ ಎಂದು ಅಂಕಿತ ಹೆಮ್ಮೆಯಿಂದ ಹೇಳಿದ್ದಾರೆ.

Join Whatsapp