ಮುಂಬೈ: ಮುಂಬೈನ ಬಾಂದ್ರಾ ಪಶ್ಚಿಮದ ಶಾಸ್ತ್ರಿ ನಗರದಲ್ಲಿ ಬುಧವಾರ ರಾತ್ರಿ ಜಿ+2 ಕಟ್ಟಡ ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.
“ಶಾಸ್ತ್ರಿ ನಗರದಲ್ಲಿ ಜಿ +2 ಮನೆ ಕುಸಿತದಲ್ಲಿ ದುರದೃಷ್ಟವಶಾತ್ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. 16 ಜನರನ್ನು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಇತರರ ವರದಿಗಳಿಗಾಗಿ ಕಾಯುತ್ತಿದ್ದೇವೆ, ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ” ಎಂದು ಬಿಎಂಸಿ ಟ್ವೀಟ್ ಮಾಡಿದೆ.
ಬಾಂದ್ರಾ ಪಶ್ಚಿಮದ ಶಾಸ್ತ್ರಿ ನಗರದಲ್ಲಿ ಜಿ +2 ಕಟ್ಟಡ ಕುಸಿದಿದೆ. ಕೆಲವು ಜನರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 3-4 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆಸ್ಪತ್ರೆಯಿಂದ ನಿಖರವಾದ ಸಂಖ್ಯೆಗಳನ್ನು ನಿರೀಕ್ಷಿಸಲಾಗುತ್ತಿದೆ” ಎಂದು ಬಿಎಂಸಿಯ ಆರಂಭಿಕ ಟ್ವೀಟ್ ನಲ್ಲಿ ತಿಳಿಸಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.