ಬೆಂಗಳೂರು: ಕೆಎಂಎಫ್ ನಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
ಸಿಎಂ ಸಿದ್ದರಾಮಯ್ಯರಿಂದ ಒಂದು ಕೋಟಿ ಹಾಲು ಶೇಖರಣೆ ಫಲಕಕ್ಕೆ ಬೆಲ್ ಹೊಡೆದು, ಗೋವುಗೆ ಪೂಜೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಜುಲೈನಲ್ಲಿ 90 ಲಕ್ಷ ಲೀಟರ್ ಪ್ರತಿ ದಿನ ಇತ್ತು. ಈ ವರ್ಷ ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲು ಉತ್ಪಾದನೆ ತಲುಪಿದ್ದೇವೆ. ಇದೊಂದು ಮೈಲಿಗಲ್ಲು. KMF ಇತಿಹಾಸದಲ್ಲಿ ಮೈಲಿಗಲ್ಲು. ನಾನು ಪಶುಸಂಗೋಪನೆ ಮಂತ್ರಿ ಸ್ವಲ್ಪ ದಿನ ಆಗಿದ್ದೆ. ಆಗ ಮಿಲ್ಕ್ ಯೂನಿಯನ್ ಗೆ ಡೈರಿಗಳನ್ನ ಸೇರಿಸಿದ್ದೆವು. ನಮ್ಮಲ್ಲಿ ಈಗ 15 ಯುನಿಯನ್ಗಳು ಇವೆ. 15 ಡೈರಿಗಳು ಇವೆ. ಇವು ಹಾಲು ಮಾರಾಟ ಮಾಡುತ್ತವೆ ಎಂದು ತಿಳಿಸಿದರು.
ಸಚಿವರಾದ ಚೆಲುವರಾಯಸ್ವಾಮಿ, ರಾಜಣ್ಣ, ಭೈರತಿ ಸುರೇಶ್, ಜಮೀರ್ ಅಹಮದ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿ ಶಾಸಕರು ಭಾಗಿಯಾಗಿದ್ದರು.