ಹೊಸದಿಲ್ಲಿ: ಒಂದು ದಿನ ಅಲ್ಪ ಪ್ರಮಾಣದದಲ್ಲಿ ಇಳಿಮುಖವಾಗಿದ್ದ ಭಾರತದ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಬುಧವಾರ ಭಾರಿ ಏರಿಕೆಯಾಗಿದೆ. ಮಂಗಳವಾರದ ಕೋವಿಡ್ ಪ್ರಕರಣಗಳಿಗೆ ಹೋಲಿಸಿದರೆ ಕಳೆದ ಒಂದು ದಿನದಲ್ಲಿ 15.8 ಶೇಕಡಾದಷ್ಟು ಅಧಿಕ ಪ್ರಕರಣಗಳು ದಾಖಲಾಗಿವೆ. ಮಂಗಳವಾರ 1.68 ಲಕ್ಷ ಪ್ರಕರಣಗಳನ್ನು ಪತ್ತೆಹಚ್ಚಲಾಗಿತ್ತು. ಬುಧವಾರ ಪುನಃ 26,657 ಹೆಚ್ಚು ಕೇಸ್ಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ವರದಿ ಬಿಡುಗಡೆ ಮಾಡಿದೆ.
ದೇಶದಲ್ಲಿ ಕಳೆದ ಒಂದು ದಿನದಲ್ಲಿ 1,94,720 ಮಂದಿ ಸೋಂಕಿತರನ್ನು ಪತ್ತೆಮಾಡಲಾಗಿದ್ದು, ದೈನಂದಿನ ಪಾಸಿಟಿವ್ ಪ್ರಕರಣ ಶೇ 11.5ರಷ್ಟು ಏರಿಕೆಯಾಗಿದೆ.ಈ ವಾರದ ಪಾಸಿಟಿವ್ ಪ್ರಕರಣವು ಶೇ 9.82ರಷ್ಟಿದೆ. 442 ಸೋಂಕಿತರು ಕೋವಿಡ್ ಗೆ ಬಲಿಯಾಗಿದ್ದಾರೆ. ಒಟ್ಟು ಮರಣ ಸಂಖ್ಯೆ 4,84,655ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.