ಮಾಸ್ಕೋ: ವಿಶ್ವದ ಹಲವುರಾಷ್ಟ್ರಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ರ ಒಡೆತನಕ್ಕೆ ಸೇರಿದೆಯೆನ್ನಲಾದ ಅಂದಾಜು 1.2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂಬ ಮಾಹಿತಿಯನ್ನು “ಆರ್ಗನೈಸ್ಡ್ ಕ್ರೈಮ್ ಆ್ಯಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿಯಲ್ಲಿ, ‘ಪುಟಿನ್ ರ ಈ ಬೇನಾಮಿ ಆಸ್ತಿಯಲ್ಲಿ ಬೇರೆ ಬೇರೆ ದೇಶಗಳಲ್ಲಿ ಹೇರಳವಾದ ಧನವಿರುವ ಬ್ಯಾಂಕ್ ಖಾತೆಗಳು, ಐಷಾರಾಮಿ ಹಡಗುಗಳು, ಖಾಸಗಿ ಜೆಟ್‌ಗಳು, ಲಂಡನ್, ದುಬೈಯಲ್ಲಿರುವ ಐಷಾರಾಮಿ ಬಂಗಲೆಗಳು ಸೇರಿವೆ’ ಎನ್ನಲಾಗಿದೆ.