ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರಿಂದ 1.24 ಕೋಟಿ ರೂ. ಕಳವು

Prasthutha|

ಧಾರವಾಡ: ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ  ಕಚೇರಿಯ ಲಾಕರಿಂದಲೇ ಕಳ್ಳರು  1 ಕೋಟಿ 24 ಲಕ್ಷ ರೂ. ಹಣ ಎಗರಿಸಿದ ಘಟನೆ ಜಿಲ್ಲೆಯ ರಾಯಾಪುರ ಬಡಾವಣೆ ನಡೆದಿದೆ. ಸಂಘದ ಕಚೇರಿಯಲ್ಲಿರುವ ಒಟ್ಟು ನಾಲ್ಕು ಲಾಕರ್ ಗಳನ್ನು ಒಡೆದಿರುವ ಕಳ್ಳರು, ಅಲ್ಲಿದ್ದ ಎಲ್ಲ ಹಣವನ್ನು  ಕದ್ದುಕೊಂಡು ಹೋಗಿದ್ದಾರೆ.

- Advertisement -

ಸೆಕ್ಯೂರಿಟಿ ಗಾರ್ಡ್‍ಗಳು ಊಟಕ್ಕೆ ಹೋಗಿದ್ದ ಸಮಯದಲ್ಲಿ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಇಲ್ಲದ ಭಾಗದಿಂದಲೇ ಬಂದು ಭಾರೀ ಮೊತ್ತದ ಹಣವನ್ನು ಕಳ್ಳತನ ಮಾಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿತ್ಯವೂ ಸಂಗ್ರಹವಾಗುತ್ತಿದ್ದ ಹಣ ಅದೇ ದಿನ ಬ್ಯಾಂಕ್‍ಗೆ ಡೆಪಾಸಿಟ್ ಆಗುತ್ತಿತ್ತು. ಆದರೆ ರಜೆ ಹಿನ್ನೆಲೆಯಲ್ಲಿ ಅ.24ರ ಮಂಗಳವಾರ ಹಣವನ್ನು ಕಟ್ಟಲಾಗಿರಲಿಲ್ಲ. ಇದು ಕಳ್ಳರಿಗೆ ಗೊತ್ತಾಗಿದ್ದು,  ಲಾಕರ್ ನಲ್ಲಿ  ಇದ್ದ ಹಣವನ್ನೆಲ್ಲ ಕದ್ದೊಯ್ದಿದ್ದಾರೆ. ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರೇ ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. ಸದ್ಯ ಕಚೇರಿಯ ಸಿಬ್ಬಂದಿಯನ್ನೂ ಪೊಲೀಸರು ತನಿಖೆ ನಡೆಸಿದ್ದಾರೆ.