ಬೆಂಗಳೂರು: ನ್ಯೂ ಇಯರ್ ಸೆಲೆಬ್ರೇಷನ್ ಗೆ ಕ್ಷಣಗಣನೆ ಶುರುವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ನ್ಯೂಇಯರ್ ಜೋಶ್ ಹೆಚ್ಚಾಗಿದೆ. ಜನರು ಪಾರ್ಟಿ ಮೂಡ್ ನಲ್ಲಿದ್ರೆ, ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ಕಲರ್ ಕಲರ್ ಲೈಟಿಂಗ್ ನೊಂದಿಗೆ ಸಿಂಗಾರಗೊಂಡಿದೆ.
ಸಿಲಿಕಾನ್ ಸಿಟಿಯಲ್ಲಿ ನ್ಯೂಇಯರ್ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಗಳಾದ ಬ್ರಿಗೇಡ್ ರೋಡ್, ಎಂ.ಜಿ. ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದಲ್ಲಿ ಸಿದ್ಧತೆ ನಡೆದಿದೆ.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಕುಡಿದು ಟೈಟ್ ಆಗೋರಿಗೆ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಣಿ ಚೆನ್ನಮ್ಮ ಪಡೆ ಕೂಡ ಕಾರ್ಯ ನಿರ್ವಸಲಿದೆ. 12 ಮಹಿಳಾ ಸೇಫ್ಟಿ ಐಲ್ಯಾಂಡ್, ಹೆಲ್ತ್ ಕೇರ್, ವಾಚ್ ಟವರ್ ನಿಯೋಜನೆ ಮಾಡಲಾಗಿದೆ. ಜೊತೆಗೆ ಭದ್ರತೆಗೆ ಅಂತ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಎರಡು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಅದೇ ರೀತಿ ಕೋರಮಂಗಲದಲ್ಲಿಯೂ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ನೀಲಿ ನಕ್ಷೆ ಹಾಕಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 180 ಕ್ಯಾಮೆರಾಗಳನ್ನ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಸಿಸಿಟಿವಿ ಮಾನಿಟರಿಂಗ್ ಗೆ ಮಿನಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.