ಹೊಸ ವರ್ಷದ ದಿನವೇ ಗುಡ್ ನ್ಯೂಸ್: LPG ಸಿಲಿಂಡರ್ ಬೆಲೆ ತುಸು ಇಳಿಕೆ!

Prasthutha|

ನವದೆಹಲಿ: ಇಂಡಿಯನ್ ಆಯಿಲ್ ಇತ್ಯಾದಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಹೊಸ ವರ್ಷಕ್ಕೆ ಎಲ್​ ಪಿಜಿ ದರಗಳನ್ನು ಇಳಿಸಿವೆ. ಕಮರ್ಷಿಯಲ್ ಎಲ್​ ಪಿಜಿ ಸಿಲಿಂಡರ್​ ಗಳು ತುಸು ಅಗ್ಗಗೊಂಡಿವೆ. 19 ಕಿಲೋ ಕಮರ್ಷಿಯಲ್ ಎಲ್ ​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 14.5 ರೂ.ನಿಂದ 16 ರೂವರೆಗೆ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 14.5 ರೂನಷ್ಟು ಇಳಿಕೆ ಆಗಿದೆ.

- Advertisement -

ಇನ್ನು, 47 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ 36.50 ರೂನಷ್ಟು ಕಡಿಮೆ ಆಗಿದೆ. ಆದರೆ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ.

ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆ ಆರು ತಿಂಗಳ ಬಳಿಕ ಮೊದಲ ಬಾರಿಗೆ ಕಡಿಮೆ ಆಗಿದೆ.

- Advertisement -

ಬೆಂಗಳೂರಿನಲ್ಲಿ ಎಲ್​ ಪಿಜಿ ದರಗಳ ಪಟ್ಟಿ
19 ಕಿಲೋ ಕಮರ್ಷಿಯಲ್ ಎಲ್​ ಪಿಜಿ: 1,880.50 ರೂ (14.50 ರೂ ಇಳಿಕೆ)
47.5 ಕಿಲೋ ಕಮರ್ಷಿಯಲ್ ಎಲ್ ​ಪಿಜಿ: 4,697.50 ರೂ (36.50 ರೂ ಇಳಿಕೆ)



Join Whatsapp