ನವದೆಹಲಿ: ರಾಜಧಾನಿಯಲ್ಲಿ ಅಪ್ ಮತ್ತು ಕಾಂಗ್ರೆಸ್ ಕಿತ್ತಾಟ ಈಗ ಮತ್ತಷ್ಟು ಹೆಚ್ಚಾಗಿದೆ. ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಅವರು, ಬಿಜೆಪಿಯಿಂದ ನಾನು ಹಣವನ್ನು ಪಡೆಯುತ್ತಿದ್ದೇನೆ ಎಂದು ದೆಹಲಿ ಸಿಎಂ ಮಾಡಿದ ಆರೋಪವನ್ನು ಅವರು ತಿರಸ್ಕರಿಸಿದರು.
ಕಳೆದ 10-12 ವರ್ಷಗಳಿಂದ ನಾನು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದೇನೆ. ತನ್ನ ವಿರುದ್ಧ ಹೊರಿಸಲಾದ ಆಧಾರರಹಿತ ಆರೋಪಗಳಿಗೆ ಪ್ರತಿಯಾಗಿ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ ಎಂದರು.
10 ಕೋಟಿ ರೂ. ಪೈಕಿ ಅರ್ಧದಷ್ಟು ಮೊತ್ತವನ್ನು ಯಮುನಾ ನದಿಯನ್ನು ಸ್ವಚ್ಛಗೊಳಿಸಲು 5 ಕೋಟಿ ರೂ. ಮತ್ತು ದೆಹಲಿಯಲ್ಲಿನ ಮಾಲಿನ್ಯ ಸಮಸ್ಯೆಗಳ ಪರಿಹಾರಕ್ಕಾಗಿ 5 ಕೋಟಿ ರೂ. ನೀಡಲಾಗುವುದು ಎಂದು ಅವರು ತಿಳಿಸಿದರು.