ಸಿಇಟಿ ಫಲಿತಾಂಶ | ಬೆಂಗಳೂರಿನ ರಕ್ಷಿತಾ, ಮಂಗಳೂರಿನ ವರುಣ್ ಗೌಡ, ವಿವೇಕ್ ಗೆ ಪ್ರಥಮ ಸ್ಥಾನ

Prasthutha|

ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ.

- Advertisement -

ಇಂಜಿನಿಯರಿಂಗ್ ನಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜಿನ ರಕ್ಷಿತಾ ಎಂ ಮೊದಲ ಸ್ಥಾನ ಪಡೆದಿದ್ದಾರೆ. ಬಿಎಸ್ ಸಿ ಅಗ್ರಿಕಲ್ಚರ್ ನಲ್ಲಿ ಮಂಗಳೂರಿನ ವರುಣ್ ಗೌಡ ಮೊದಲ ಸ್ಥಾನ ಪಡೆದರೆ, ಬಿವಿಎಸ್ ಸಿ ಮತ್ತು ಬಿ-ಫಾರ್ಮಾ/ಡಿ ಫಾರ್ಮಾ ವಿಭಾಗದಲ್ಲಿ ಬೆಂಗಳೂರಿನ ಸಾಯಿ ವಿವೇಕ್ ಪಿ. ಅಗ್ರ ಸ್ಥಾನ ಪಡೆದಿದ್ದಾರೆ.

ಜು.30ರಿಂದ ಆ.1ರ ವರೆಗೆ ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ಗೆ 1,94,419 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಅವರ ಪೈಕಿ 1,75,349 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಅವರಲ್ಲಿ 1,53,470 ಮಂದಿ ಇಂಜಿನಿಯರಿಂಗ್ ಕೋರ್ಸ್ ರ್ಯಾಂಕ್ ಪಡೆದಿದ್ದಾರೆ. ಕೃಷಿ ಕೋರ್ಸ್ ಗೆ 1,27,627 , ಪಶುಸಂಗೋಪನಾ ಕೋರ್ಸ್ ಗೆ 1,29,666, ಯೋಗ ಮತ್ತು ನ್ಯಾಚುರೋಪಥಿಗೆ 1,29,611 ಹಾಗೂ ಬಿ-ಫಾರ್ಮಾ ಮತ್ತು ಡಿ-ಫಾರ್ಮಾಕ್ಕೆ 1,55,552 ಮಂದಿಗೆ ರ್ಯಾಂಕ್ ನೀಡಲಾಗಿದೆ.

- Advertisement -

ಕೊರೋನಾ ಕಾರಣದಿಂದ ಪರೀಕ್ಷೆ ವಿಳಂಬವಾಗಿ ನಡೆದಿತ್ತು. ಆದರೆ, ಪರೀಕ್ಷೆ ನಡೆದ 21 ದಿನಗಳಲ್ಲೇ ಫಲಿತಾಂಶ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಕೆಸಿಇಟಿ 2020 ಫಲಿತಾಂಶವನ್ನು  ಕೆಇಎಯ ಅಧಿಕೃತ ವೆಬ್ ಸೈಟ್ cetonline.karnataka.gov.in/kea ನಲ್ಲಿ ಪರೀಕ್ಷಿಸಬಹುದಾಗಿದೆ.

Join Whatsapp