ಸರಕಾರ ರಚಿಸಲು ಬಿಜೆಪಿ ನಕಾರ | ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ

Prasthutha|

- Advertisement -

ಪುದುಚೇರಿ : ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರ ರಚಿಸುವುದಕ್ಕೆ ಬಿಜೆಪಿ ನಿರಾಕರಿಸಿದ ಹಿನ್ನೆಲೆ ರಾಷ್ಟ್ರಪತಿ ಆಳ್ವಿಕೆಯವನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿ ಸಾಮಿನಾಥನ್ ‘ಈ ಹಂತದಲ್ಲಿ ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ರಚಿಸುವುದಿಲ್ಲ. ಪ್ರಧಾನಿ ನಾಯಕತ್ವದಿಂದ ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ಟ ಕಳಗಂ ಜೊತೆಗೆ ಸರ್ಕಾರ ರಚಿಸಿ ಪುದುಚೇರಿಯ ಜನರಿಗೆ ಹೊಸ ಉಜ್ವಲ ಭವಿಷ್ಯವನ್ನು ನಿರ್ಮಿಸುತ್ತೇವೆ’ ಎಂದರು.

- Advertisement -

ಕಾಂಗ್ರೆಸ್-ಡಿಎಂಕೆ ಒಕ್ಕೂಟವು ಆರು ರಾಜೀನಾಮೆಗಳ ನಂತರ 26 ಸದಸ್ಯರ ವಿಧಾನಸಭೆಯಲ್ಲಿ 14 ರ ಬಹುಮತವನ್ನು ಕಳೆದುಕೊಂಡಿತು. ಐದು ಕಾಂಗ್ರೆಸ್ ಮತ್ತು ಒಬ್ಬ ಡಿಎಂಕೆ ಶಾಸಕರು ರಾಜೀನಾಮೆ ನೀಡಿ ವಿಶ್ವಾಸಮತದಲ್ಲಿ ವಿ ನಾರಾಯಣ್ ಸ್ವಾಮಿ ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದಾರೆ.

Join Whatsapp