ಸಂಸ್ಥೆ ಶೇರುದಾರರಿಂದ ಸಾಲ ಒಪ್ಪಂದದ ಕುರಿತ ಮಾಹಿತಿ ಬಚ್ಚಿಟ್ಟ ಆರೋಪ | ಎನ್.ಡಿ.ಟಿವಿಗೆ ದಂಡ ವಿಧಿಸಿದ ಸೆಬಿ

Prasthutha|

ನವದೆಹಲಿ: ಎನ್.ಡಿ.ಟಿವಿ ಸಂಸ್ಥೆಯ ಶೇರುದಾರರಿಂದ ಕೆಲ ಸಾಲ ಒಪ್ಪಂದಗಳ ಕುರಿತ ಮಾಹಿತಿಯನ್ನು ಬಚ್ಚಿಟ್ಟ ಆರೋಪದ ಮೇರೆಗೆ ಸೆಕ್ಯುರಿಟೀಸ್ ಎಕ್ಸ್ ಚೇಂಜ್ ಬೊರ್ಡ್ ಆಫ್ ಇಂಡಿಯಾ(ಸೆಬಿ) ಎನ್.ಡಿ.ಟಿವಿ ಪ್ರವರ್ತಕರಾದ ಪ್ರಣಯ್ ರಾಯ್, ಪತ್ನಿ ರಾಧಿಕಾ ರಾಯ್ ಹಾಗೂ ಆರ್.ಆರ್.ಪಿ.ಆರ್ ಹೊಲ್ಡಿಂಗ್ಸ್ ಗೆ 27 ಕೋಟಿ ರೂ. ದಂಡ ವಿಧಿಸಿದೆ.

- Advertisement -

ಸಾಲ ಒಪ್ಪಂದದ ಕುರಿತ ಕೆಲವು ನಿಬಂಧನೆಗಳು ಎನ್.ಡಿ.ಟಿವಿ ಸಂಸ್ಥೆಯ ಶೇರುದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸೆಬಿ ತಿಳಿಸಿದೆ.

2017ರಲ್ಲಿ ಮೊದಲ ಬಾರಿಗೆ ಈ ಕುರಿತಾದ ತನಿಖೆ ಆರಂಭಿಸಲಾಗಿತ್ತು. ಆ ಸಂದರ್ಭ ಎನ್.ಡಿ.ಟಿವಿ ಶೇರುದಾರರ ಸಂಸ್ಥೆಯಾಗಿದ್ದ ಕ್ವಾಂಟಮ್ ಸೆಕ್ಯುರಿಟೀಸ್ ಪ್ರೈವೆಟ್ ಲಿಮಿಟೆಡ್ ತನ್ನ ದೂರಿನಲ್ಲಿ, ಎನ್.ಡಿ.ಟಿವಿಯು ವಿಶ್ವವರ್ಧನ್ ಕಮರ್ಷಿಯಲ್ ಪ್ರೈವೆಟ್ ಲಿಮಿಟೆಡ್ ಜತೆಗಿನ ಸಾಲ ಒಪ್ಪಂದದ ಕುರಿತ ಕೆಲವು ಮಾಹಿತಿಯನ್ನು ಬಹಿರಂಗಗೊಳಿಸದೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆಪಾದಿಸಿತ್ತು.

- Advertisement -

ಎನ್.ಡಿ.ಟಿವಿಯ ಒಂದು ಸಾಲ ಒಪ್ಪಂದವು ಐಸಿಐಸಿಐ ಬ್ಯಾಂಕ್ ಜತೆಗಿದ್ದರೆ, ಇನ್ನೆರಡು ವಿಶ್ವವರ್ಧನ್ ಕಮರ್ಷಿಯಲ್ ಪ್ರೈವೆಟ್ ಲಿಮಿಟೆಡ್(ವಿಸಿಪಿಎಲ್) ಜತೆಗಿತ್ತು ಎಂದು ಸೆಬಿ ತಿಳಿಸಿದೆ.



Join Whatsapp