ಸಂಸದೆ ಸುಮಲತಾ ವಿರುದ್ಧ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ

Prasthutha|

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರ ಕುರಿತು ನೀಡಿದ ಹೇಳಿಕೆಯೊಂದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.

- Advertisement -


ಕೆ.ಆರ್.ಎಸ್. ಬಿರುಕು ಬಿಟ್ಟರೆ ಸಂಸದೆ ಸುಮಲತಾ ಅವರನ್ನೇ ಅಡ್ಡಡ್ಡ ಮಲಗಿಸಿ ಎಂದು ಕುಮಾರಸ್ವಾಮಿ ಹೇಳಿದ್ದರು.
ಕೆ.ಆರ್.ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟಿಗೆ ಹಾನಿಯಾಗುತ್ತಿದೆ. ಅದರಿಂದ ಅಣೆಕಟ್ಟೆ ಬಿರುಕು ಬಿಡುತ್ತಿದೆ ಎಂದು ಸುಮಲತಾ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ‘ಕೆಆರ್‌ಎಸ್ ಅಣೆಕಟ್ಟೆಯನ್ನು ಏನೋ ಇವರೇ ರಕ್ಷಣೆ ಮಾಡುತ್ತಿರುವಂತೆ ಮಾತನಾಡುತ್ತಿದ್ದಾರೆ. ಬಹುಶಃ ಇವರನ್ನೇ ಡ್ಯಾಮ್ ಬಾಗಿಲಿಗೆ ಮಲಗಿಸಿ ಬಿಟ್ಟರೆ ಅಣೆಕಟ್ಟೆ ಬಿಗಿಯಾಗಿ ಬಿಡುತ್ತದೆ. ನೀರು ಹೋಗದ ರೀತಿ ಬಾಗಿಲಿಗೆ ಇವರನ್ನೇ ಮಲಗಿಸಿ ಬಿಟ್ಟರೆ ಎಲ್ಲ ಸರಿ ಆಗಿ ಬಿಡುತ್ತದೆ’ ಎಂದು ಹೇಳಿದ್ದಾರೆ


ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸುಮಲತಾ, ಮಾಜಿ ಸಿಎಂ ಆಗಿ ಕುಮಾರಸ್ವಾಮಿ ಈ ರೀತಿ ಹೇಳಿಕೆ ಕೊಡಬಾರದು. ‘ಈ ತುಚ್ಛ ಹೇಳಿಕೆಯಿಂದ ಮಹಿಳೆಯರ ಬಗ್ಗೆ ಅವರಿಗಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡುವುದನ್ನು ಇನ್ನೂ ಬಿಟ್ಟಿಲ್ಲ. ಕಳೆದ ಚುನಾವಣೆಯಲ್ಲಿ ಆದ ಪಾಠದಿಂದ ಏನೂ ಕಲಿತಂತೆ ಇಲ್ಲ’ ಎಂದು ಕಿಡಿ ಕಾರಿದ್ದಾರೆ.



Join Whatsapp