ಸಂಭಲ್ ಹಿಂಸಾಚಾರ: ಸಂಸದ ಝಿಯಾವುರ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ

Prasthutha|

ಪ್ರಯಾಗರಾಜ: ಸಂಭಲ್ ನಲ್ಲಿ ಮಸೀದಿ ಸಮೀಕ್ಷೆ ವೇಳೆ ನಡೆದ ಗಲಭೆ ಸಂಬಂಧ ಸಮಾಜವಾದಿ ಪಕ್ಷದ ಸಂಸದ ಝಿಯಾವುರ್ ರೆಹಮಾನ್ ಬರಖ್ ಅವರ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ. ಆದರೆ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದು ಮಾಡಲು ನಿರಾಕರಿಸಿದೆ.

- Advertisement -


ನ್ಯಾಯಮೂರ್ತಿಗಳಾದ ರಾಜೀವ್ ಗುಪ್ತಾ ಹಾಗೂ ಅಝರ್ ಹಸನ್ ಇದ್ರೀಸಿ ಅವರಿದ್ದ ಪೀಠವು ಬರಖ್ ಅವರ ಅರ್ಜಿಯ ವಿಚಾರಣೆ ನಡೆಸಿತು. ಬರಖ್ ಪರ ವಕೀಲ ಇಮ್ರಾನುಲ್ಲಾ ಹಾಜರಾದರು.


ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಕೋರ್ಟ್ ಆದೇಶಿಸಿದ ಬಳಿಕ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬರಖ್ ವಿರುದ್ಧ ಸಂಭಲ್ ಪೊಲೀಸರು ಎಫ್ ಐಆರ್ ದಾಖಲು ಮಾಡಿಕೊಂಡಿದ್ದರು. ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದರು. ಬರಖ್ ವಿರುದ್ಧ ನಡೆಯುತ್ತಿರುವ ವಿಚಾರಣೆ ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ವಿಚಾರಣೆಗೆ ಸಹಕರಿಸುವಂತೆ ಬರಖ್ ಅವರಿಗೆ ಸೂಚಿಸಿದೆ.



Join Whatsapp