ಶುಕ್ರವಾರ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳಲ್ಲಿಯೇ ಶ್ರೀಮಂತ ಸ್ಟಾರ್ ಚಂದ್ರು!

Prasthutha|

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಹಾಗೂ ದೇಶದಲ್ಲಿ ಎರಡನೇ ಹಂತದ ಚುನಾವಣೆ ಶುಕ್ರವಾರ ನಡೆಯಲಿದ್ದು, ದೇಶಾದ್ಯಂತ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಮಂಡ್ಯದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಉದ್ಯಮಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೆ ಗೌಡ ಶ್ರೀಮಂತಿಕೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನವೂ ಕರ್ನಾಟಕದ ಪಾಲಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ ಸುರೇಶ್ ಅದನ್ನು ತನ್ನದಾಗಿಸಿದ್ದಾರೆ.

- Advertisement -

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯಲ್ಲಿ ಈ ಮಾಹಿತಿ ಇದೆ. 2ನೇ ಹಂತದ ಲೋಕಸಭಾ ಚುನಾವಣೆ ಒಟ್ಟು 88 ಕ್ಷೇತ್ರಗಳಿಗೆ ನಡೆಯುತ್ತಿದ್ದು,1191 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಅಭ್ಯರ್ಥಿಗಳ ಪೈಕಿ ಒಟ್ಟು 390 ಜನ ಕೋಟ್ಯಾಧಿಪತಿಗಳಾಗಿದ್ದಾರೆ.

ಅಭ್ಯರ್ಥಿಗಳ ಪೈಕಿ ಶೇಕಡಾ 33ರಷ್ಟು ಜನ ಕೋಟ್ಯಾಧಿಪತಿಗಳಾಗಿದ್ದಾರೆ. ಮೊದಲ ಸ್ಥಾನದಲ್ಲಿರುವ ಮಂಡ್ಯ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಆಸ್ತಿ ಮೌಲ್ಯ 622 ಕೋಟಿ ರೂ. ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ, ಕಾಂಗ್ರೆಸ್ ಟ್ರಬಲ್ ಶೂಟರ್‌ ಡಿಕೆ ಶಿವಕುಮಾರ್ ಸೋದರ ಡಿಕೆ ಸುರೇಶ್‌ ಅವರ ಆಸ್ತಿ ಮೌಲ್ಯ 593 ಕೋಟಿ. ರೂ. ಆಗಿದೆ.

- Advertisement -

ದೇಶದ ಎರಡನೇ ಹಂತದ ಚುನಾವಷೆಯಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Join Whatsapp