ಶತಕದತ್ತ ಪೆಟ್ರೋಲ್ ಬೆಲೆ । ಟ್ರೆಂಡಿಂಗ್ ನಲ್ಲಿ ‘ಮೋದಿ ತೈಲ ಹಗರಣ’ ಹ್ಯಾಶ್ ಟ್ಯಾಗ್

Prasthutha|

ನವದೆಹಲಿ: ಕಳೆದ ಏಳು ದಿನಗಳಿಂದ ನಿರಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರುತ್ತಿದೆ. ರವಿವಾರದಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 50 ರೂ. ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರವು 95 ರೂ. ದಾಟಿದ್ದು 100 ರೂ. ಆಗುವತ್ತ ದಾಪುಗಾಲಿಡುತ್ತಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, #ModiFuelScam (ಮೋದಿ ತೈಲ ಹಗರಣ) ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

- Advertisement -

ಭಾರತ ಸಂಪೂರ್ಣ ಆರ್ಥಿಕ ಕುಸಿತ ಕಾಣುತ್ತಿರುವಾಗ ಬೆಲೆಯೇರಿಕೆ ಜನಸಾಮಾನ್ಯರಿಗೆ ಮಾರಕವಾಗುತ್ತಿದೆ. ದೈನಂದಿನ ವಸ್ತುಗಳ ದುಬಾರಿ ಬೆಲೆಯಿಂದಾಗಿ ಜನಜೀವನ ಕಂಗೆಟ್ಟು ಹೋಗಿದೆ. ಈ ನಡುವೆ ಕೊರೋನಾ ಸಾಂಕ್ರಾಮಿಕದಿಂದಾಗಿ ಸಾರ್ವಜನಿಕರು ಉದ್ಯೋಗವನ್ನೂ ಕಳೆದುಕೊಂಡಿರುವಾಗ ಮೋದಿ ಭರವಸೆ ನೀಡಿರುವ ಆಚ್ಚೇದಿನ್ ಇದೇನಾ? ಎಂದು ಬಳಕೆದಾರರು ಟ್ವೀಟ್ ಮೂಲಕ ಪ್ರಶ್ನಿಸುತ್ತಿದ್ದಾರೆ.

ಸರಕಾರ ಸಮಸ್ಯೆ ಸೃಷ್ಟಿಸುತ್ತಿದೆ. ಪ್ರತಿಪಕ್ಷವೂ ಮೌನವಾಗಿದೆ ಎಂದು ಜನರು ಆಕ್ಷೇಪಿಸುತ್ತಿದ್ದಾರೆ.



Join Whatsapp