ನವದೆಹಲಿ : ಭಾರತದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಮರುಪರಿಶೀಲನೆಗೆ ಕುರಿತಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಹೈ ಕಮೀಶನರ್ ಮಿಶೆಲ್ ಬ್ಯಾಚೆಲೆಟ್ ಆಗ್ರಹಿಸಿದ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ಬೆಂಬಲಿತ ಆರೆಸ್ಸೆಸ್ ಸಂಯೋಜಿತ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಆಕ್ರೋಶ ವ್ಯಕ್ತಪಡಿಸಿದೆ.
“ವಿಶ್ವ ಸಂಸ್ಥೆಯ ಅಧೀನ ಸಂಸ್ಥೆಯು ಭಯೋತ್ಪಾದನೆಗೆ ನೀಡಲಾಗುವ ದೇಣಿಗೆ ಮತ್ತು ಎನ್ ಜಿಒಗಳು ವಿನಿಮಯಿಸುವ ದೇಣಿಗೆ ಬಗ್ಗೆ ಮಾತನಾಡದಿರುವುದು ನಾಚಿಕೆಗೇಡು. ಸಂಸ್ಥೆಯು ಭಾರತ ವಿರೋಧಿಗಳ ಕೈಯಲ್ಲಿ ನಡೆಸಲ್ಪಡುತ್ತಿದೆಯೇ?’’ ಎಂದು ವಿಎಚ್ ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ.
ವಿಎಚ್ ಪಿ ವಕ್ತಾರ ವಿನೋದ್ ಬನ್ಸಾಲ್ ಕೂಡ ಟ್ವೀಟ್ ಮೂಲಕ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಮುಖ್ಯಸ್ಥರ ಹೇಳಿಕೆಯನ್ನು ಖಂಡಿಸಿದ್ದಾರೆ.