ವಿಶ್ವದಲ್ಲೇ ಅತೀ ದೊಡ್ಡ ವಲಸಿಗ ಸಮುದಾಯ ಭಾರತ

Prasthutha|

- Advertisement -

ನವದೆಹಲಿ: ಭಾರತವು ವಿಶ್ವದಲ್ಲೇ ಅತಿ ದೊಡ್ಡ ವಲಸಿಗ ಸಮುದಾಯವನ್ನು ಹೊಂದಿದೆ. ವಿಶ್ವದ ವಿವಿಧ ಭಾಗಗಳಲ್ಲಿ 18 ದಶಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಮೈಗ್ರೇಷನ್2020 ಹೈಲೈಟ್ಸ್ ವರದಿ ಮಾಡಿದೆ. ಯುಎಇ, ಸೌದಿ ಅರೇಬಿಯಾ ಮತ್ತು ಅಮೇರಿಕಾದಲ್ಲಿ ಭಾರತದ ಹೆಚ್ಚಿನ ವಲಸಿಗರು ಇದ್ದಾರೆ. ವಾರ್ತಾ ಏಜನ್ಸಿಯಾದ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಅಧೀನದಲ್ಲಿರುವ ಜನಸಂಖ್ಯಾ ವಿಭಾಗದ ಮುಖ್ಯಸ್ಥ ಕ್ಲೇರ್ ಮೆನೊಸ್ಸಿಸ್ ಈ ವಿಷಯವನ್ನು ತಿಳಿಸಿದ್ದಾರೆ.

ಯುಎಇಯಲ್ಲಿ 35 ಲಕ್ಷ, ಅಮೆರಿಕದಲ್ಲಿ 27 ಲಕ್ಷ ಮತ್ತು ಸೌದಿ ಅರೇಬಿಯಾದಲ್ಲಿ 25 ಲಕ್ಷ ವಲಸಿಗ ಭಾರತೀಯರಿದ್ದಾರೆ. ಆಸ್ಟ್ರೇಲಿಯಾ, ಕೆನಡಾ, ಕುವೈತ್, ಒಮಾನ್, ಪಾಕಿಸ್ತಾನ, ಕತಾರ್ ಮತ್ತು ಯುಕೆಗಳಲ್ಲಿ ದೊಡ್ಡ ಸಂಖ್ಯೆಯ ಭಾರತೀಯರಿದ್ದಾರೆ. ಅಮೇರಿಕಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ವಲಸಿಗರನ್ನು ಹೊಂದಿರುವ ದೇಶವಾಗಿದೆ. 2020 ರ ವೇಳೆಗೆ ಅಮೇರಿಕಾದಲ್ಲಿ  5.1 ಕೋಟಿ ವಲಸಿಗರು ಇದ್ದರು. 1.6 ಕೋಟಿ ವಲಸಿಗರನ್ನು ಹೊಂದಿದ ಜರ್ಮನಿ ಎರಡನೇ ಸ್ಥಾನದಲ್ಲಿದೆ.



Join Whatsapp