ವಿದೇಶಿಯರಿಗೂ ಪೌರತ್ವ ನೀಡಲಿದೆ ಯುಎಇ! | ಯಾರೆಲ್ಲ ಅರ್ಜಿ ಹಾಕಬಹುದು.. ಇಲ್ಲಿದೆ ವಿವರ!

Prasthutha|

- Advertisement -

ದುಬೈ: ವಿದೇಶಿಯರಿಗೆ ಪೌರತ್ವ ನೀಡುವ ಕಾನೂನನ್ನು ಯುಎಇ ಜಾರಿಗೆ ತಂದಿದೆ. ಹೂಡಿಕೆದಾರರು, ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಬರಹಗಾರರು ಮತ್ತು ಕಲಾವಿದರಿಗೆ ಯುಎಇ ಪೌರತ್ವ ನೀಡಲಿದೆ. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರು ಈ ಪ್ರಮುಖ ಬದಲಾವಣೆಯನ್ನು ಘೋಷಿಸಿದ್ದಾರೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಈ ವಿಭಾಗಗಳಿಗೆ ಪೌರತ್ವ ನೀಡುವುದರೊಂದಿಗೆ ದೇಶವು ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯಲಿದೆ ಎಂದು ಶೇಖ್ ಮೊಹಮ್ಮದ್ ಹೇಳಿದ್ದಾರೆ.

ಅರ್ಹತೆ ಇರುವವರ ದಾಖಲೆಗಳನ್ನು ಸ್ಥಳೀಯ ನ್ಯಾಯಾಲಯಗಳು ಮತ್ತು ಕಾರ್ಯಕಾರಿ ಮಂಡಳಿಗಳು ಪರಿಶೀಲಿಸಿದ ನಂತರ ಪೌರತ್ವವನ್ನು ನೀಡಲಾಗುತ್ತದೆ. ಪೌರತ್ವ ಪಡೆಯುವ ವ್ಯಕ್ತಿಯ ಕುಟುಂಬಕ್ಕೂ ಈ ಪ್ರಯೋಜನವು ಲಭ್ಯವಾಗಲಿದೆ. ಹೂಡಿಕೆದಾರರು ತಮ್ಮ ಹೆಸರಿನಲ್ಲಿ ಯುಎಇಯಲ್ಲಿ ಸಂಸ್ಥೆಯನ್ನು ಹೊಂದಿರಬೇಕು. ವೈದ್ಯರು ಕನಿಷ್ಠ 10 ವರ್ಷಗಳ ಕಾಲ ದೇಶದಲ್ಲಿ ಸೇವೆ ಸಲ್ಲಿಸಿರಬೇಕು. ವಿಶೇಷ ದಾಖಲೆಗಳನ್ನು ಸಹ ಹೊಂದಿರಬೇಕು. ವಿಜ್ಞಾನಿಗಳು ಯುಎಇಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿರಬೇಕು. ಮತ್ತು ಅವರು ಕೆಲಸ ಮಾಡಿದ ಸಂಸ್ಥೆಯ ಶಿಫಾರಸನ್ನು ಹೊಂದಿರಬೇಕು. ಕಲಾವಿದರು ಅಂತರರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಗಳನ್ನು ಪಡೆದವರಾಗಿರಬೇಕು.



Join Whatsapp