ಬೆಂಗಳೂರು: ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ.
ಹಿರಿಯ ಪತ್ರಕರ್ತರಾದ ಚೀಜ ರಾಜೀವ್, ವಿನೋದ್ ಕುಮಾರ್ ನಾಯ್ಕ್, ವಿಜಯಲಕ್ಷ್ಮಿ ಶಿಬರೂರು, ಎಸ್.ಗಿರೀಶ್ ಬಾಬು, ನೌಶಾದ್ ಬಿಜಾಪುರ್ ಸಹಿತ ಹಲವರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ನೌಶಾದ್ ಬಿಜಾಪುರ್ ಅವರನ್ನು 2021 ರ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಾರ್ತಾ ಇಲಾಖೆ ಆಯುಕ್ತರ ಅಧ್ಯಕ್ಷತೆಯ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.
ರಾಜ್ಯ ಸರ್ಕಾರವು 2017-2023ರ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗಾಗಿ 14 ಹೆಸರುಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪುರಸ್ಕೃತರು 1 ಲಕ್ಷ ರೂಪಾಯಿ ನಗದು ಪಡೆಯಲಿದ್ದಾರೆ.
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಲ್ಲಿ ಚಿ.ಜಾ ರಾಜೀವ್ (2017), ದೇವಯ್ಯ ಗುತ್ತೇದಾರ್ (2018), ಗಿರೀಶ್ ಲಿಂಗಣ್ಣ (2019), ಯೋಗೇಶ್ ಎಂಎನ್ (2020), ನೌಶಾದ್ ಬಿಜಾಪುರ (2021), ಸತೀಶ್ ಜಿಟಿ (2022) ಮತ್ತು ಎಸ್ ಗಿರೀಶ್ ಬಾಬು (2023) ಸೇರಿದ್ದಾರೆ.
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಲ್ಲಿ ವಿಜಯಲಕ್ಷ್ಮಿ ಶಿಬರೂರು (2017), ಬಿಎಂಟಿ ರಾಜೀವ್ (2018), ವಿನೋದ ನಾಯ್ಕ್ (2019), ಮಾಲ್ತೇಶ್ ಅಂಗೂರ (2020), ಸುಧೀರ್ ಶೆಟ್ಟಿ (2021), ಮಲ್ಲಿಕಾರ್ಜುನ್ ಹೊಸಪಾಳ್ಯ (2022) ಮತ್ತು ಆರ್ ಮಂಜುನಾಥ್ (20) ಸೇರಿದ್ದಾರೆ.