ಲಾಕ್‌ಡೌನ್‌ನಿಂದ ಭಾರತಕ್ಕೆ ಆರ್ಥಿಕ ಹಾನಿ: ಮೂಡೀಸ್ ವರದಿ

Prasthutha|

ಹೊಸದಿಲ್ಲಿ: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕ ಹಾನಿಯು ಗಂಭೀರ ಸ್ವರೂಪದ್ದಾಗಲಿರುವ ಸಾಧ್ಯತೆಯಿದೆ ಎಂದು ಮೂಡೀಸ್ ಇನ್ವೆಸ್ಟರ್ ಸರ್ವಿಸ್ ಹೇಳಿದೆ.

- Advertisement -

ಕೊರೋನ ವೈರಸ್ ಮಹಾಮಾರಿ ಭಾರತಕ್ಕೆ ಕಾಲಿಡುವ ಮೊದಲೇ ಭಾರತದ ಆರ್ಥಿಕತೆ ಕಳೆದ ಆರು ವರ್ಷಗಳಲ್ಲಿ ನಿಧಾನವಾಗಿ ಬೆಳೆಯುತ್ತಿತ್ತು. ಶೂನ್ಯ ಬೆಳವಣಿಗೆಯ ಹಿಂದಿನ ಅಂದಾಜಿಗೆ ಹೋಲಿಸಿದರೆ, ಮಾರ್ಚ್ 2021ಕ್ಕೆ ಅಂತ್ಯಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ನಿಜವಾದ ಜಿಡಿಪಿಯು ಕುಗ್ಗಲಿದೆ ಎಂದು ಎಂದು ಮೂಡೀಸ್‌ನ ಸಹಾಯಕ ಉಪಾಧ್ಯಕ್ಷೆ ಹಾಗೂ ವಿಶ್ಲೇಷಕಿ ಡಬೋರಾ ಟಾನ್ ವರದಿಯಲ್ಲಿ ಹೇಳಿದ್ದಾರೆ. 2021-22ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದೂ ಹೇಳಿದೆ.

Join Whatsapp