ಲವ್ ಜಿಹಾದ್ ಕಾನೂನು ವಿಷಯದಲ್ಲಿ ಸು.ಕೋರ್ಟ್ ಮಧ್ಯಪ್ರವೇಶಕ್ಕೆ ಮುಸ್ಲಿಂ ಲೀಗ್ ಆಗ್ರಹ

Prasthutha|

ಹೊಸದಿಲ್ಲಿ: ಅಂತರ್ ಧರ್ಮೀಯ ವಿವಾಹಗಳ ವಿರುದ್ಧ ಬಿಜೆಪಿ ಆಳುವವ ರಾಜ್ಯಗಳು ಜಾರಿಗೊಳಿಸುರುವ ಸುಗ್ರೀವಾಜ್ನೆಗಳ ಗಾಂಭೀರ್ಯತೆಯನ್ನು ಸುಪ್ರೀಂ ಕೋರ್ಟ್ ಸ್ವಯಂ ಪರಿಗಣಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐ.ಯು.ಎಂ.ಎಲ್) ಒತ್ತಾಯಿಸಿದೆ.

- Advertisement -

ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಪುನರ್ ಸ್ಥಾಪಿಸಬೇಕೆಂದು ಐ.ಯು.ಎಂ.ಎಲ್ ಒತ್ತಾಯಿಸಿದೆ. ಕಳೆದ ವರ್ಷ ರಾಜ್ಯದ ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ಹಿಂಪಡೆಯುವ ಸಂದರ್ಭದಲ್ಲಿ ಈ ಕುರಿತು ಭರವಸೆ ನೀಡಲಾಗಿತ್ತು ಎಂದು ಪಕ್ಷ ಹೇಳಿದೆ.

ಕಲ್ಲಿಕೋಟೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸೆಕ್ರೇಟರಿಯೇಟ್ ಸಭೆಯಲ್ಲಿ ಹಲವು ವಿಷಗಳ ಕುರಿತು ನಿರ್ಣಯಗಳನ್ನು ಪಾಸು ಮಾಡಿದ ಬಳಿಕ ಐಯುಎಂಎಲ್ ದೇಶದಲ್ಲಿ ಹದಗೆಡುತ್ತಿರುವ ಸಾಮಾಜಿಕ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ.

- Advertisement -

ಅಂತರ್ಜಾತಿ ಮದುವೆ ಅಥವಾ ತಥಾಕತಿಥ “ಲವ್ ಜಿಹಾದ್”ಅನ್ನು ಗಂಭೀರವಾಗಿ ಪರಿಗಣಿಸಿದ ಮುಸ್ಲಿಂ ಲೀಗ್, ಉತ್ತರ ಪ್ರದೇಶ ಸರಕಾರದ ವಿವಾದಾತ್ಮಕ ಮತಾಂತರ ವಿರೋಧಿ ಸುಗ್ರೀವಾಜ್ನೆ ಯಾವ ರೀತಿಯಲ್ಲಿ ರಾಜ್ಯವನ್ನು ರಾಜಕೀಯ ದ್ವೇಷ, ವಿಭಜನೆ ಹಾಗೂ ಧರ್ಮಾಂಧತೆಯ ಕೇಂದ್ರವನ್ನಾಗಿ ಪರಿವರ್ತಿಸಿದೆ ಎಂಬ ಕುರಿತು 104 ಉನ್ನತ ನಿವೃತ್ತ ಅಧಿಕಾರಿಗಳ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದೆ.

ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳು ಕಲ್ಪಿತ ಲವ್ ಜಿಹಾದ್ ನೆಪದಲ್ಲಿ ಈ ಸಂವಿಧಾನ ವಿರೋಧಿ ಕಾನೂನನ್ನು ಜಾರಿಗೊಳಿಸಿದೆ. ಈ ರಾಜ್ಯಗಳ ನಂತರ ಬಿಜೆಪಿ ಆಡಳಿತದ ಉತ್ತರಖಾಂಡ, ಹಿಮಾಚಲ ಪ್ರದೇಶ, ಕರ್ನಾಟಕ, ಹರಿಯಾಣ ಮತ್ತು ಅಸ್ಸಾಂನಂತಹ ರಾಜ್ಯಗಳು ಜಾರಿಗೊಳಿಸಿವೆ ಅಥವಾ ಇಂತಹ ಕಾನೂನುಗಳನ್ನು ಜಾರಿಗೊಳಿಸುವ ಕುರಿತ ಇಂಗಿತವನ್ನು ವ್ಯಕ್ತಪಡಿಸಿದೆ ಎಂದು ನಿರ್ಣಯ ಹೇಳಿದೆ.

“ಭಾರತದಲ್ಲಿ ಅಂತರ್ ಧರ್ಮೀಯ ವಿವಾಹವೆಂಬುದು ಇಸ್ಲಾಮನ್ನು ವಿಸ್ತರಿಸುವ ವಿಸ್ತೃತ ಯೋಜನೆಯ ಭಾಗವಾಗಿ ಹಿಂದೂ ಮಹಿಳೆಯರನ್ನು ಮತಾಂತರಿಸುವ ಮುಸ್ಲಿಮರ ಸಂಚು ಎಂಬುದಾಗಿ ಹಿಂದುತ್ವ ಪಡೆಗಳು ಇತ್ತೀಚೆಗೆ ನಿರಂತರವಾಗಿ ದುರುದ್ದೇಶದೊಂದಿಗೆ ಪ್ರಚುರಪಡಿಸುತ್ತಾ ಬಂದಿವೆ. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಪೊಲೀಸ್ ಇಲಾಖೆಗೂ  ಈ ವಿಷವನ್ನು ತುಂಬಿಸಲಾಗುತ್ತಿದೆ” ಎಂದು ನಿರ್ಣಯ ಹೇಳಿದೆ.

ಮುಸ್ಲಿಮ್ ಯುವಕರು ತಮ್ಮ ಹೆತ್ತವರು ಮತ್ತು ಸಂಬಂಧಿಗಳೊಂದಿಗೆ  ಸುಳ್ಳು ಪ್ರಕರಣಗಳಲ್ಲಿ ಬಂಧಿತರಾಗುತ್ತಿದ್ದಾರೆ. ಅವರ ವಿರುದ್ಧ ಚಾರ್ಜ್ ಶೀಟ್ ಗಳನ್ನು ಸಲ್ಲಿಸಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಮೊಹಲ್ಲಾ ಜಮಾಅತ್ ನ ಪ್ರತಿನಿಧಿಗಳೊಂದಿಗೆ ಖಾಝಿಗಳಿಗೂ ಕಿರುಕುಳ ನೀಡಲಾಗುತ್ತಿದೆ ಮತ್ತು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಲೀಗ್ ಹೇಳಿದೆ.



Join Whatsapp