ಲಯನ್ಸ್ ಜಿಲ್ಲೆ 317ಡಿ ವತಿಯಿಂದ ಸರಕಾರಿ ಆಸ್ಪತ್ರೆಗಳಿಗೆ 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆ ಹಸ್ತಾಂತರ

Prasthutha|

ಮಂಗಳೂರು: ಕೊರೋನಾ ಎರಡನೇ ಅಲೆಯ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಈಗಿನಿಂದಲೇ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮಾತ್ ಕರೆ ನೀಡಿದರು.

- Advertisement -

ಕೊರೋನಾ ಸೈನಿಕ್ ಟಾಸ್ಕ್ ಫೋರ್ಸ್ ನ ಚೆಯರ್ ಪರ್ಸನ್ ಹಾಗೂ ಕಮಂಡಿಗ್ (HQ & Ops ) ಸಿವಿಲ್ ಡಿಫೆನ್ಸ್ ನ ಸಹಾಯಕ ಮುಖ್ಯ ಅಧಿಕಾರಿ  ಲಯನ್.ಡಾ. ಪಿ.ಆರ್.ಎಸ್.ಚೇತನ್ ಹಾಗೂ  ಮಲ್ಟಿಪಲ್ ಕೌನ್ಸಿಲ್ ಚೆಯರ್‌ಮೆನ್ ಲಯನ್ ಡಾ.ನಾಗರಾಜ್ ವಿ.ಬೈರಿ ರವರ ಸತತ ಪರಿಶ್ರಮದಿಂದ ಸಿಮನ್ಸ್ ಇಂಡಿಯಾ ಹಾಗೂ ನಸ್‌ಕೊಮ್ (NASSCOM) ಫೌಂಡೇಷನ್ ಲಯನ್ಸ್ ಜಿಲ್ಲೆ 317.ಡಿ ಇವರಿಗೆ  ಒದಗಿಸಿದ ಸುಮಾರು 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳನ್ನು ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ಹಾಗೂ ಇನ್ನಿತರ ಸರ್ಕಾರಿ ಆಸ್ಪತ್ರೆಗಳಿಗೆ  ಹಸ್ತಾಂತರ ಮಾಡುವ ಕಾರ್ಯಕ್ರಮ ಸೋಮವಾರ ಸಂಜೆ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದ್ದು,  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಅವರು ಮಾತನಾಡಿದರು.

 “ಲಯನ್ಸ್ ಸಂಸ್ಥೆ ನಮ್ಮ ಜಿಲ್ಲೆಯೂ ಸೇರಿ ಇಡೀ ದೇಶಾದಾದ್ಯಂತ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಕೋವಿಡ್ ಮಾಹಮಾರಿ ವ್ಯಾಪಿಸುತ್ತಿದ್ದ ಸಂದರ್ಭದಲ್ಲಿ ಸಾವಿರಾರು ಮಂದಿ ಬಡವರಿಗೆ ಅಹಾರ ಕಿಟ್ ಸೇರಿದಂತೆ ಇನ್ನಿತರ ಕೋವಿಡ್ ಸಾಮಾಗ್ರಿಗಳನ್ನು ಲಯನ್ಸ್ ಸಂಸ್ಥೆ ವಿತರಿಸುತ್ತಾ ಬಂದಿರುವುದನ್ನು ನಾನು ಗಮನಿಸಿದ್ದೇನೆ. ಇಂದು ಸರಿ ಸುಮಾರು 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳನ್ನು ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ಹಾಗೂ ಇನ್ನಿತರ ಆಸ್ಪತ್ರೆಗಳಿಗೆ  ಹಸ್ತಾಂತರ ಮಾಡಿರುವುದು ಹೆಮ್ಮೆಯ ವಿಷಯ” ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಲಯನ್ಸ್ ಕ್ಲಬ್ ಜಿಲ್ಲೆ 317.ಡಿ ಇದರ ಜಿಲ್ಲಾ ರಾಜ್ಯಪಾಲಕ ಲಯನ್ ಡಾ. ಗೀತಾ ಪ್ರಕಾಶ್ ಎ.  ಪ್ರಾಸ್ತಾವಿಕವಾಗಿ ಮಾತನಾಡಿ, “ಕೊರೋನಾ ಮಾಹಾಮಾರಿ ವೈದ್ಯಕೀಯ ಲೋಕವನ್ನೇ ಅಲ್ಲೊಲ್ಲ ಕಲ್ಲೊಲ್ಲ ಮಾಡಿದೆ. ನಿರಂತರವಾಗಿ ಸೋಂಕಿತರ ಸೇವೆಯಲ್ಲಿ ತೊಡಗಿದಂತಹ ಅದೆಷ್ಟೋ ಮಂದಿ ವೈದ್ಯರು, ಆರೋಗ್ಯ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಬಲಿಕೊಟ್ಟಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆ ಪ್ರಾಣದ ಹಂಗು ತೊರೆದು ಸೋಂಕು ಪೀಡಿತರ ನೋವಿಗೆ ಸ್ಪಂದಿಸಿ ಅವರಿಗೆ ಅಗತ್ಯವಿರುವಂತಹ ಅಹಾರ ಕಿಟ್ ಹಾಗೂ ಕೋವಿಡ್ ಸಾಮಾಗ್ರಿಗಳನ್ನು ನೀಡುತ್ತಾ ಬಂದಿದೆ” ಎಂದರು.

“ನಾನೂ ಒಬ್ಬ ವೈದ್ಯನಾಗಿರುವುದರಿಂದ ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಜಿಲ್ಲೆಗೆ ಇನ್ನಷ್ಟು ಹೆಚ್ಚಿನ ಕೋವಿಡ್ ರಕ್ಷಣಾ ಸಲಕರಣೆಗಳನ್ನು ನೀಡಬೇಕು. ನಮ್ಮ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಕೋವಿಡ್ ಸಲಕರಣೆಗಳು ಲಭ್ಯವಿರಬೇಕು ಎಂಬ ಸಂಕಲ್ಪ ಮಾಡಿದ್ದೆ. ಉದಾರ ದಾನಿಗಳ ನೆರವಿನಿಂದ ನಮ್ಮ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅತ್ಯುತ್ತಮ ಕೋವಿಡ್ ಸಲಕರಣೆಗಳನ್ನು ವಿತರಿಸಬೇಕು ಎಂಬ ನನ್ನ ಕನಸು  ಲಯನ್.ಡಾ. ಪಿ.ಆರ್.ಎಸ್.ಚೇತನ್ ಹಾಗೂ ಲಯನ್ ಡಾ.ನಾಗರಾಜ್ ವಿ.ಬೈರಿ ಇವರ ಸತತ ಪರಿಶ್ರಮದಿಂದ ನನಸಾಗಿದೆ” ಎಂದು ಡಾ. ಗೀತಾ ಪ್ರಕಾಶ್ ಹರ್ಷ ವ್ಯಕ್ತಪಡಿಸಿದರು.     

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಮೆಡಿಕಲ್  ಸೂಪರಿಂಟೆಂಡೆಂಟ್ ಡಾ.ದುರ್ಗಾ ಪ್ರಸಾದ್ ಸುಮಾರು 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳನ್ನು ನಗರದ ಲೇಡಿಗೋಷನ್ ಹಾಗೂ ಇನ್ನಿತರ ಸರ್ಕಾರಿ ಆಸ್ಪತ್ರೆಗಳಿಗೆ  ನಗರದ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಕೊರೋನಾ ಸೈನಿಕ್ ಟಾಸ್ಕ್ ಫೋರ್ಸ್ ನ ಚೆಯರ್ ಪರ್ಸನ್ ಹಾಗೂ ಕಮಂಡಿಗ್ (HQ & Ops ) ಸಿವಿಲ್ ಡಿಫೆನ್ಸ್ ನ ಸಹಾಯಕ ಮುಖ್ಯ ಅಧಿಕಾರಿ  ಲಯನ್ ಡಾ. ಪಿ.ಆರ್.ಎಸ್.ಚೇತನ್ ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಲಯನ್ ಜಿಲ್ಲೆ 317ಡಿ ಇದರ ಸಾರ್ವಜನಿಕ ಸಂಪರ್ಕಧಿಕಾರಿ (PRO) ಲ. ವಿಟ್ಲ ಮಂಗೇಶ್ ಭಟ್, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಸ್ಥಳೀಯ ಮನಪಾ ಸದಸ್ಯೆ ಪೂರ್ಣಿಮಾ, ನಗರದ ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಮೆಡಿಕಲ್  ಸೂಪರಿಂಟೆಂಡೆಂಟ್ ಡಾ.ದುರ್ಗಾ ಪ್ರಸಾದ್, ಜಿಲ್ಲಾ ಪ್ರಥಮ ವಿಡಿಜಿ ಲಯನ್ ವಸಂತ್ ಕುಮಾರ್ ಶೆಟ್ಟಿ,  ಜಿಲ್ಲಾ ಲಯನ್ ಸಿ.ಪಿ. ದಿನೇಶ್, ಜಿಲ್ಲಾ ಕೋಶಾಧಿಕಾರಿ ಲಯನ್ ಮೊಹಮ್ಮದ್ ಇಕ್ಬಾಲ್, ಲಯನ್ಸ್  ಜಿಲ್ಲೆ 317ಡಿ ಇದರ ಜಿಲ್ಲಾ ಸಂಪುಟ ಸೇವಾ ಸಂಯೋಜಕರಾದ ಜಿ.ಆರ್.ಶೆಟ್ಟಿ, ಹೆಚ್ಚುವರಿ ರಾಜ್ಯಪಾಲರ ಸಹ ಸಂಯೋಜಕ ವಿ.ಗಂಗಾಧರ್, ನಿಕಟ ಪೂರ್ವ ರಾಜ್ಯಪಾಲರಾದ ಜೆ.ಕೆ.ರಾವ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಸಂಚಾಲಕ ಲ. ಪ್ರವೀಣ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಜಿಎಸ್‌ಟಿ ವಿಭಾಗದ ಚೆಯರ್‌ಮೆನ್ ಬ್ರಹ್ಮಮ್ ವಂದಿಸಿದರು.



Join Whatsapp