ರೈತ ಹೋರಾಟ: ಜಲಫಿರಂಗಿ ಹತ್ತಿದ ಯುವಕನ ವಿರುದ್ಧ ಕೊಲೆ ಯತ್ನ ಪ್ರಕರಣ

Prasthutha|

ಹೊಸದಿಲ್ಲಿ: ಕೃಷಿ ಮಸೂದೆಯ ವಿರುದ್ಧ ದಿಲ್ಲಿಗೆ ಪ್ರತಿಭಟನಾ ಜಾಥಾ ಹೊರಟಿರುವ ರೈತರ ಮೇಲೆ ನೀರು ಸುರಿಸಿದ ಪೊಲೀಸರ ಜಲಫಿರಂಗಿ ವಾಹನವನ್ನು ಯುವಕನೋರ್ವ ಹತ್ತಿದ ದೃಶ್ಯ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವುಂಟುಮಾಡಿತ್ತು. ಹರಿಯಾಣದ ಅಂಬಾಲಾದ ಈ ಯುವಕನ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

- Advertisement -

ವೀಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರೈತ ಹೋರಾಟದ ಹೀರೊವಾಗಿ ಯುವಕ ಗುರುತಿಸಲ್ಪಟ್ಟಿದ. 26ರ ಹರೆಯದ ನವದೀಪ್ ಸಿಂಗ್ ಉತ್ತರ ಭಾರತದ ಕೊರೆಯುವ ಚಳಿಯ ಮಧ್ಯೆ ಪ್ರತಿಭಟನಾ ನಿರತ ರೈತರ ಮೇಲೆ ನೀರು ಸುರಿಸುತ್ತಿದ್ದ ನೀಲ ಜಲಫಿರಂಗಿಯನ್ನು ಆರಿಸುವುದಕ್ಕಾಗಿ ವಾಹನವನ್ನು ಆತ ಹತ್ತಿದ್ದ.

ರೈತ ಸಂಘಟನೆಯೊಂದರ ನಾಯಕ ಜೈಸಿಂಗ್ ರ ಮಗ ನವದೀಪ್ ವಿರುದ್ಧ ಪೊಲೀಸರು ಗರಿಷ್ಠ ಜೀವಾವಧಿ ತನಕ ವಿಸ್ತರಿಸಬಲ್ಲ ಕೊಲೆಯತ್ನ, ಗಲಭೆ ಮತ್ತು ಕೋವಿಡ್ 19 ನಿಯಮ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಿದ್ದಾರೆ.



Join Whatsapp