ರೈತ ಹೋರಾಟದ ಕುರಿತ ಒಂದು ಟ್ವೀಟ್ ನಿಂದ ಲಕ್ಷಾಂತರ ಅಭಿಮಾನಿಗಳನ್ನು ಕಳೆದುಕೊಂಡ ತೆಂಡೂಲ್ಕರ್

Prasthutha|

- Advertisement -

ನಿವೃತ್ತಿ ಜೀವನದ ಬಳಿಕವೂ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ ಸಚಿನ್​ ರೈತ ಪರ ಹೋರಾಟದ ವಿಚಾರದಲ್ಲಿ ಮಾಡಿದ ಒಂದೇ ಒಂದು ಟ್ವೀಟ್​ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ.

ಪಾಪ್​ ತಾರೆ ರಿಹನ್ನಾ ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಚಾರವಾಗಿ ಟ್ವೀಟ್​ ಮಾಡಿ ನಾವೇಕೆ ಇದರ ಬಗ್ಗೆ ಮಾತನಾಡಬಾರದು..? ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೇ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಕೂಡ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು.

- Advertisement -

ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿನ್​ ತೆಂಡೂಲ್ಕರ್​ “ಭಾರತದ ಸಾರ್ವಭೌಮತ್ವವು ರಾಜಿಯಾಗುವಂತಹದ್ದಲ್ಲ, ಅಂತಾರಾಷ್ಟ್ರೀಯ ಶಕ್ತಿಗಳು ಪ್ರೇಕ್ಷಕರೇ ಹೊರತು ಭಾಗಿದಾರರಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್‌ ಪ್ರತಿಕ್ರಿಯಿಸಿದ್ದರು.ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಅಂತಾರಾಷ್ಟ್ರೀಯ ತಾರೆಯರಿಗೆ ಪ್ರತಿಕ್ರಿಯಿಸುತ್ತಾ ಅವರು ಈ ರೀತಿ ಟ್ವೀಟ್ ಮಾಡಿದ್ದರು.ಭಾರತ ಏನೆಂಬುದು ಭಾರತೀಯರಿಗೆ ತಿಳಿದಿದೆ; ಭಾರತಕ್ಕಾಗಿ ನಿರ್ಧಾರ ತೆಗೆದುಕೊಳ್ಳಲು ನಾವು ದೇಶದ ಅಡಿಯಲ್ಲಿ ಒಗ್ಗಟ್ಟಾಗುವುದನ್ನು ಮುಂದುವರಿಸುತ್ತೇವೆ ”ಎಂದು ಸಚಿನ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದರು.  

ಇದೀಗ ತೆಂಡೂಲ್ಕರ್ ಅವರ ವರ್ತನೆಯಿಂದ ಬೇಸರಗೊಂಡಿರುವ ಅವರ ಬೆಂಬಲಿಗರು, ಶರಪೋವಾ ಕುರಿತು 2015ರಲ್ಲಿ ಮಾಡಿದ ಟ್ರೋಲ್ ಗಳಿಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಅಲ್ಲದೆ, ಶರಪೋವಾರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಕ್ಷಮೆಯನ್ನೂ ಯಾಚಿಸುತ್ತಿದ್ದಾರೆ. ಇನ್ನೊಂದು ಕಡೆ ಸೋಶಿಯಲ್​ ಮೀಡಿಯಾದಲ್ಲಿ ಸಚಿನ್​ ವಿರುದ್ಧ ಟ್ರೋಲ್​ಗಳ ಸುರಿಮಳೆಯೇ ಹರಿಯುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಸಚಿನ್​ ರೈತರ ವಿರುದ್ಧ ಮಾತನಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Join Whatsapp