ದೆಹಲಿಯ ಬೀದಿಗಳಲ್ಲಿ ಇಂದು ನಡೆದ ಘಟನೆ ಅತ್ಯಂತ ನೋವು ತಂದಿದ್ದು, ಮನಸ್ಸು ಕಲಕುವಂತೆ ಮಾಡಿದೆ. ರೈತ ಸಹೋದರ, ಸಹೋದರಿಯರ ಬಗ್ಗೆ ಕೇಂದ್ರದ ಸಂವೇದನಾರಹಿತ ಮನಸ್ಥಿತಿಯೇ ಇಂದಿನ ಘಟನೆಗೆ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ರೈತರ ಜಾಥಾ ಸಂದರ್ಭದಲ್ಲಿ ನಡೆದ ಹಿಂಸಾಚಾರದಿಂದ ತೀವ್ರ ನೋವಾಗಿದೆ. ಸಂವೇದನಾರಹಿತ ಕೇಂದ್ರದ ಮನಸ್ಥಿತಿ ಈ ಪರಿಸ್ಥಿತಿಗೆ ಕಾರಣ ಎಂದು ಟೀಕಿಸಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿದ್ದಾರೆ.
“ಮೊದಲನೆಯದಾಗಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಕಾನೂನುಗಳನ್ನು ಅಂಗೀಕರಿಸಲಾಯಿತು. ತದನಂತರ ಭಾರತದಾದ್ಯಂತ ಪ್ರತಿಭಟನೆಗಳು ಮತ್ತು ಕಳೆದ 2 ತಿಂಗಳುಗಳಿಂದ ದೆಹಲಿಯ ಬಳಿ ಪ್ರತಿಭಟನೆ ನಡೆಸುತ್ತಿದ್ದರೂ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ಈಗಲಾದರೂ ಕೃಷಿ ಕಾನೂನುಗಳನ್ನು ರದ್ದುಗೊಳಿಸಿ ರೈತರೊಂದಿಗೆ ಮಾತುಕತೆಗೆ ಮುಂದಾಗಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ರೈತರ ಬಗ್ಗೆ ಕೇಂದ್ರದ ಸಂವೇದನಾರಹಿತ ಮನಸ್ಥಿತಿಯೇ ಹಿಂಸಾಚಾರಕ್ಕೆ ಕಾರಣ: ಮಮತಾ ಬ್ಯಾನರ್ಜಿ
Prasthutha|