ರೈತರಿಗೆ ಬೆಂಬಲ ಸೂಚಿಸಿ ರಾಜೀನಾಮೆ ನೀಡಿದ ಪಂಜಾಬ್ ಡಿಐಜಿ

Prasthutha|

ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ, ಚಂಡೀಗಢದ ಕಾರಾಗೃಹಗಳ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್(ಡಿಐಜಿ) ಆಗಿ ನೇಮಕಗೊಂಡಿದ್ದ ಲಖ್ವಿಂದರ್ ಸಿಂಗ್ ಜಖರ್(56) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

- Advertisement -

ಜಖರ್ ಅವರು ಪ್ರಧಾನ ಕಾರ್ಯದರ್ಶಿ(ಕಾರಾಗೃಹ) ಡಿಕೆ ತಿವಾರಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, “ನಾನು ಮೊದಲು ರೈತ, ನಂತರ ಪೊಲೀಸ್ ಅಧಿಕಾರಿ. ಇಂದು ನನಗೆ ಯಾವುದೇ ಸ್ಥಾನ ದೊರಕಿದ್ದರೂ, ಅದಕ್ಕೆ ಕಾರಣ ನನ್ನ ತಂದೆ ಹೊಲಗಳಲ್ಲಿ ಕೃಷಿಕರಾಗಿ ಕೆಲಸ ಮಾಡಿದ್ದು. ಕೃಷಿಯಿಂದಲೇ ಸಂಪಾದಿಸಿ ಅವರು ನನ್ನನ್ನು ವಿದ್ಯಾವಂತನಾಗಿಸಿದ್ದಾರೆ. ಆದ್ದರಿಂದ, ನನಗೆ ಸಿಕ್ಕಿರುವ ಎಲ್ಲದಕ್ಕೂ ನಾನು ಕೃಷಿಗೆ ಋಣಿಯಾಗಿದ್ದೇನೆ ”ಎಂದು ಬರೆದಿದ್ದಾರೆ.

ಜೈಲುಗಳ ಸಹಾಯಕ ಮಹಾನಿರ್ದೇಶಕ ಪರ್ವೀನ್ ಕುಮಾರ್ ಸಿನ್ಹಾ, ಜಖರ್ ಅವರು ರಾಜೀನಾಮೆ ನೀಡಿರುವುದನ್ನು ದೃಢಪಡಿಸಿದ್ದಾರೆ.

- Advertisement -

 14 ಪಂಜಾಬ್(ನಭಾ ಅಕಾಲ್) ರೆಜಿಮೆಂಟ್ ನಲ್ಲಿ 1989-1994ರ ವರೆಗೆ ಸಣ್ಣ ಸೇವಾ ಆಯೋಗದ ಅಧಿಕಾರಿಯಾಗಿ ಆಗಿ ಸೇವೆ ಸಲ್ಲಿಸಿದ್ದ ಅವರು ನಂತರ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದರು.

ಪ್ರತಿಭಟನಾನಿರತ ರೈತರನ್ನು ಬೆಂಬಲಿಸಲು, ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಅವರ ತಾಯಿ ಪ್ರೋತ್ಸಾಹಿಸಿದರು ಎಂದು ಹೇಳಿದ್ದಾರೆ.

Join Whatsapp