ರೇವಣ್ಣ ಈ ಹಿಂದೆ ಇಂಗ್ಲೆಂಡ್ ನಲ್ಲಿ ಸಿಕ್ಕಿಬಿದ್ದಿದ್ದರು: ಶಿವರಾಮೇಗೌಡ

Prasthutha|

ಮಂಡ್ಯ: ಎಚ್ .ಡಿ ರೇವಣ್ಣನವರದ್ದು ಇದೇ ಮೊದಲಲ್ಲ, ಹಿಂದೆಯೂ ಇಂಗ್ಲೆಂಡ್ ನಲ್ಲಿ ಒಂದ್ಸಲ ಸಿಕ್ಕಿಬಿದ್ದಿದ್ದರು ಎಂದು ಜೆಡಿಎಸ್ ನ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿದ್ದಾರೆ.

- Advertisement -


ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ವ್ಯಕ್ತಿಯಲ್ಲ, ನಾನು ರೇವಣ್ಣ ಇಂಗ್ಲೆಂಡ್ ಗೆ ಹೋಗಿದ್ದಾಗ ಅಲ್ಲಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ರು. ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡ್ ನಲ್ಲೂ ನಡೆದಿತ್ತು ಎಂದು ಶಿವರಾಮೇಗೌಡ ಹೇಳಿದ್ದಾರೆ. ಬ್ಲ್ಯೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೋ ಇದಾವೋ ಇಲ್ಲ ಗೊತ್ತಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಗುಡುಗಿದ್ದಾರೆ.

Join Whatsapp